ಬೀಜಿಂಗ್: ಹಾಂಕಾಂಗ್ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದ್ದೇವೆ ಎಂದು ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಹೇಳಿದ್ದಾರೆ.
ಬೀಜಿಂಗ್‌ನಲ್ಲಿ ಐದು ವರ್ಷಕ್ಕೊಮ್ಮೆ ನಡೆಯುತ್ತಿರುವ ಆಡಳಿತರೂಢ ಕಮ್ಯುನಿಸ್ಟ್ ಪಕ್ಷದ 20ನೇ ಸಮ್ಮೇಳನ ಉದ್ಘಾಟಿಸಿ ಮಾತನಾಡಿರುವ ಅವರು, ಅವ್ಯವಸ್ಥೆಯಿಂದ ಕೂಡಿದ ಹಾಂಕಾಂಗ್ ಮೇಲೆ ನಿಯಂತ್ರಣ ಸಾಧಿಸುವ ಮೂಲಕ ಸಮರ್ಪಕ ಆಡಳಿತ ವ್ಯವಸ್ಥೆಯನ್ನಾಗಿಪರಿವರ್ತಿಸಿದ್ದೇವೆ ಎಂದು ಹೇಳಿದರು.
ಹಾಂಕಾಂಗ್ ಅನ್ನು ದೇಶಪ್ರೇಮಿಗಳು ಆಳುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಅಲ್ಲದೆ ಚೀನಾದೊಂದಿಗೆ ಹಾಂಕಾಂಗ್ ಏಕೀಕರಣವನ್ನು ಬೆಂಬಲಿಸುತ್ತೇವೆ ಎಂದು ಹೇಳಿದರು.
ತೈವಾನ್ ಪ್ರತ್ಯೇಕತಾವಾದದ ವಿರುದ್ಧವೂ ಚೀನಾ ದೊಡ್ಡ ಹೋರಾಟವನ್ನೇ ನಡೆಸಿದೆ. ತೈವಾನ್ ಸಮಸ್ಯೆ ಬಗೆಹಿರಿಸುವುದು ಚೀನಾದ ಜನರಿಗೆ ಸಂಬಂಧಪಟ್ಟಿದ್ದಾಗಿದೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.