ಬೀಜಿಂಗ್:ಚೀನಾದ ಪ್ರಸಿದ್ಧ ಸಿನಿಮಾ ಮತ್ತು ಕಿರುತೆರೆ ನಟಿಝೆಂಗ್ ಶುವಾಂಗ್‌ಗೆ ತೆರಿಗೆ ವಂಚನೆ ಆರೋಪದಡಿ ಅಲ್ಲಿನ ಸರ್ಕಾರವು ₹ 338 ಕೋಟಿ (46.1 ಮಿಲಿಯನ್ ಡಾಲರ್) ದಂಡ ವಿಧಿಸಿದೆ.
ಚೀನಾವು ಸಂಪತ್ತಿನ ಅಂತರವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಹೊಸ ನೀತಿಯನ್ನು ಜಾರಿಗೆ ತಂದಿದ್ದು, ಈ ನೀತಿಯಡಿ ಸರ್ಕಾರವು ಸೆಲೆಬ್ರಿಟಿಗಳ ಮೇಲೆ ನಿಗಾವಹಿಸಿದೆ.
2019–2020ರ ನಡುವಿನ ಅಘೋಷಿತ ಆದಾಯ ಹಾಗೂ ತೆರಿಗೆ ವಂಚನೆ ಆರೋಪದಡಿ ನಟಿ ಝೆಂಗ್ ಶುವಾಂಗ್‌ಗೆ ಶಾಂಘೈ ಮುನ್ಸಿಪಲ್ ತೆರಿಗೆ ಸೇವೆಯು ಶುಕ್ರವಾರ ದಂಡ ವಿಧಿಸಿದೆ.
‘ಝೆಂಗ್ ಪ್ರಕರಣವು ಸಿನಿಮಾ ಮತ್ತು ದೂರದರ್ಶನ ಉದ್ಯಮದಲ್ಲಿ ಕಾಣಸಿಗುವ ‘ಯಿನ್ ಮತ್ತು ಯಾಂಗ್’ ಒಪ್ಪಂದದಂತಿದೆ’ ಎಂದು ಅಧಿಕಾರಿಗಳು ಹೇಳಿದರು.
‘ಯಿನ್ ಮತ್ತು ಯಾಂಗ್’ ಒಪ್ಪಂದದಡಿ ಎರಡು ದಾಖಲೆ ಪತ್ರಗಳನ್ನು ಮಾಡಲಾಗುತ್ತದೆ. ವಾಸ್ತವಿಕ ದಾಖಲೆಯು ಸಂಸ್ಥೆ ಮತ್ತು ವ್ಯಕ್ತಿಯ ನಡುವೆ ಮಾತ್ರ ಇರುತ್ತದೆ. ಇನ್ನೊಂದು ದಾಖಲೆಯಲ್ಲಿ ನಟಿ/ನಟರಿಗೆ ಕಡಿಮೆ ಆದಾಯವನ್ನು ನಮೂದಿಸಲಾಗಿರುತ್ತದೆ. ಎರಡನೇ ದಾಖಲೆಯನ್ನು ತೆರಿಗೆ ಅಧಿಕಾರಿಗಳಿಗೆ ಸಲ್ಲಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.