ADVERTISEMENT

ತೈವಾನ್‌ ಸಂಸ್ಥೆಗಳ ಮೇಲೆ ಚೀನಾ ಹ್ಯಾಕರ್‌ಗಳ ದಾಳಿ

ಏಜೆನ್ಸೀಸ್
Published 24 ಜೂನ್ 2024, 15:12 IST
Last Updated 24 ಜೂನ್ 2024, 15:12 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಹಾಂಗ್‌ಕಾಂಗ್‌: ಚೀನಾ ಪ್ರಾಯೋಜಿತ ಶಂಕಿತ ಹ್ಯಾಕಿಂಗ್‌ ತಂಡವು ತೈವಾನ್‌ನ ಸಂಸ್ಥೆಗಳನ್ನು ಗುರಿಯಾಗಿರಿಸಿಕೊಂಡು ಸೈಬರ್ ದಾಳಿ ನಡೆಸಿದೆ. ಅದರಲ್ಲೂ ಪ್ರಮುಖವಾಗಿ ಸರ್ಕಾರಿ ಸಂಸ್ಥೆ, ಶಿಕ್ಷಣ, ತಂತ್ರಜ್ಞಾನ ಹಾಗೂ ರಾಜತಾಂತ್ರಿಕತೆ ವಲಯಗಳ ಮೇಲೆ ಈ ದಾಳಿ ನಡೆದಿದೆ ಎಂದು ಸೈಬರ್‌ ಭದ್ರತೆ ಗುಪ್ತಚರ ಸಂಸ್ಥೆ ‘ರೆಕಾರ್ಡೆಡ್‌ ಫ್ಯೂಚರ್‌’ ಸಂಸ್ಥೆ ತಿಳಿಸಿದೆ.

ಇತ್ತೀಚಿನ ವರ್ಷಗಳಲ್ಲಿ ಚೀನಾ– ತೈವಾನ್‌ ನಡುವೆ ಸಂಬಂಧ ಹದಗೆಟ್ಟಿದೆ. ತೈವಾನ್‌ ಜಲಸಂಧಿಯ ಉದ್ದದ ದ್ವೀಪ‍ವನ್ನು ಚೀನಾ ತನ್ನದೆಂದು ಹೇಳಿಕೊಂಡಿದ್ದು, ಎರಡು ರಾಷ್ಟ್ರಗಳ ನಡುವಿನ ಪರಿಸ್ಥಿತಿ ಬಿಗಡಾಯಿಸಿದೆ.

ADVERTISEMENT

ತೈವಾನ್‌ನಲ್ಲಿ ಜನವರಿಯಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆ ಬಳಿಕ ನಡೆದ ಅಧಿಕಾರ ಹಸ್ತಾಂತರ ಪ್ರಕ್ರಿಯೆಗೂ ಮುನ್ನ ಹಾಗೂ ನಂತರದ ಅವಧಿಯಲ್ಲಿ (2023ರ ನವೆಂಬರ್‌ನಿಂದ 2024ರ ಏಪ್ರಿಲ್‌) ‘ರೆಡ್‌ ಜ್ಯೂಲಿಯಟ್‌’ ತಂಡದಿಂದ ಸೈಬರ್‌ ದಾಳಿ ನಡೆದಿದೆ ಎಂದು ಆರೋಪಿಸಿದೆ. 

ತೈವಾನ್‌ನ ಸಂಸ್ಥೆಗಳ ಮೇಲೆ ‘ರೆಡ್‌ ಜ್ಯೂಲಿಯಟ್‌’ ಸಂಸ್ಥೆಯೂ ಈ ಹಿಂದೆಯೂ ಸೈಬರ್ ದಾಳಿ ನಡೆಸಿದ್ದರೂ, ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಿದೆ ಎಂದು ಸುರಕ್ಷತೆ ಕಾಳಜಿ ಸಂಸ್ಥೆ ‘ರೆಕಾರ್ಡೆಡ್‌ ಫ್ಯೂಚರ್‌ ಅನಾಲಿಸ್ಟ್‌’ ತಿಳಿಸಿದೆ.

ವರದಿ ಪ್ರಕಾರ, ‘ರೆಡ್‌ಜ್ಯೂಲಿಯಟ್‌’ ಸಂಸ್ಥೆಯು 24 ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದು, ಲಾವೋಸ್‌, ಕೀನ್ಯಾ, ರುವಾಂಡ ಹಾಗೂ ತೈವಾನ್‌ನ ಮೇಲೂ ಈ ದಾಳಿ ನಡೆದಿದೆ. ಹಾಂಗ್‌ಕಾಂಗ್‌, ದಕ್ಷಿಣ ಕೊರಿಯಾದ ಧಾರ್ಮಿಕ ಸಂಸ್ಥೆಗಳಿಗೆ ಸೇರಿದ ವೆಬ್‌ಸೈಟ್‌ಗಳ ಮೇಲೂ ದಾಳಿ ನಡೆಸಿದೆ. ಆದರೆ, ಸಂಸ್ಥೆಗಳ ಹೆಸರುಗಳನ್ನು ಬಹಿರಂಗಪಡಿಸಿಲ್ಲ.

‘ರೆಡ್‌ ಜ್ಯೂಲಿಯಟ್‌’ ಹ್ಯಾಕಿಂಗ್‌ ಮಾದರಿಯು ಚೀನಾ ಬೆಂಬಲಿತ ಹ್ಯಾಕರ್ಸ್‌ಗಳ ಮಾದರಿಯಾಗಿದೆ. ಐ.ಪಿ ವಿಳಾಸಗಳ ಭೌಗೋಳಿಕ ಸ್ಥಳಗಳು ಚೀನಾದ ಪೂಜಿಯಾನ್‌ ಪ್ರಾಂತ್ಯದ ಫುಝೌ ನಗರದಿಂದ ಹೊರಗಿರುವ ಸಾಧ್ಯತೆಯಿದೆ ಎಂದು ತೈವಾನ್‌ ಸರ್ಕಾರದ ವರದಿ ತಿಳಿಸಿದೆ.

ಈ ಕುರಿತಂತೆ ತೈವಾನ್‌ನ ವಿದೇಶಾಂಗ ಸಚಿವಾಲಯವು ಯಾವುದೇ ಹೇಳಿಕೆ ನೀಡಿಲ್ಲ. ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ಈ ಆರೋಪವನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

‘ನೀವು ನಿರ್ದಿಷ್ಟವಾಗಿ ಪ್ರಸ್ತಾಪಿಸಿರುವ ಸಂಸ್ಥೆಗಳ ಮೇಲೆ ನನಗೆ ಗೊತ್ತಿಲ್ಲ. ಆದರೆ, ನೀವು ಪ್ರಸ್ತಾಪಿಸಿದ ಸಂಸ್ಥೆಯು ಈ ಹಿಂದೆಯೂ ತಿರುಚಿದ ಮಾಹಿತಿ ಹರಡಿದೆ. ಆ ಕಂಪನಿಯು ಏನು ಮಾಡುತ್ತದೆ ಎಂಬುದರ ಕುರಿತು ಯಾವುದೇ ವೃತ್ತಿಪರತೆ ಅಥವಾ ವಿಶ್ವಾಸರ್ಹತೆ ಉಳಿಸಿಕೊಂಡಿಲ್ಲ’ ಎಂದು ಇಲಾಖೆ ವಕ್ತಾರ ಮಾವೋ ನಿಂಗ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.