ADVERTISEMENT

ಚೀನಾ ಸೇನಾ ಪಡೆ ಸಿಬ್ಬಂದಿಗೆ ಶೇ 40ರಷ್ಟು ವೇತನ ಏರಿಕೆ

ಅಧ್ಯಕ್ಷ ಷಿ ಜಿನ್‌ಪಿಂಗ್ ಆದೇಶ| 20 ಲಕ್ಷ ಸೈನಿಕರಿಗೆ ಅನುಕೂಲ

ಪಿಟಿಐ
Published 23 ಜನವರಿ 2021, 11:20 IST
Last Updated 23 ಜನವರಿ 2021, 11:20 IST
ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್
ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್    

ಬೀಜಿಂಗ್: ಸೇನೆಯನ್ನು ಶಕ್ತಿಯುತ ಕಾರ್ಯಪಡೆಯಾಗಿ ಮತ್ತು ಆಧುನಿಕವಾಗಿ ರೂಪಿಸುವುದರ ಭಾಗವಾಗಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಸೇನೆ ಸಿಬ್ಬಂದಿಗೆ ಈ ವರ್ಷದಿಂದ ಜಾರಿಗೆ ಬರುವಂತೆ ಶೇ 40ರಷ್ಟು ವೇತನ ಹೆಚ್ಚಿಸಿದ್ದಾರೆ. ಸೇನೆಯ 20 ಲಕ್ಷ ಸಿಬ್ಬಂದಿಗೆ ಇದರ ಅನುಕೂಲವಾಗಲಿದೆ.

ವೇತನ ಏರಿಕೆ ಕುರಿತು ಅಧಿಕೃತ ಆದೇಶ ಶೀಘ್ರದಲ್ಲಿಯೇ ಹೊರಬೀಳಲಿದೆ ಎಂದು ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಹಾಂಗ್‌ಕಾಂಗ್ ಮೂಲದ ಸೌತ್‌ ಚೀನಾ ಮಾರ್ನಿಂಗ್ ಪೋಸ್ಟ್ ಪತ್ರಿಕೆಯು ಈ ಕುರಿತು ವರದಿ ಮಾಡಿದೆ.

ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿ (ಪಿಎಲ್ಎ) ಅನ್ನು ಆಧುನಿಕ ಮತ್ತು ಶಕ್ತಿಯುತ ಪಡೆಯಾಗಿ ರೂಪಿಸಲು ಕೈಗೊಂಡ ವಿವಿಧ ಸುಧಾರಣೆ ಕಾರ್ಯಕ್ರಮಗಳ ಹಿಂದೆಯೇ, ಸಿಬ್ಬಂದಿ ವೇತನದಲ್ಲಿ ಬಂಪರ್ ಏರಿಕೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

ADVERTISEMENT

ಈ ವರ್ಷದಿಂದ ಜಾರಿಗೆ ಬರುವಂತೆ ಚೀನಾ ತನ್ನ ರಾಷ್ಟ್ರೀಯ ರಕ್ಷಣಾ ಕಾಯ್ದೆ (ಎನ್‌ಡಿಎಲ್‌) ಅನ್ನು ಪರಿಷ್ಕರಿಸಿದ್ದು, ಕೇಂದ್ರೀಯ ಸೇನಾ ಆಯೋಗದ (ಸಿಎಂಸಿ) ಅಧಿಕಾರವನ್ನು ನೀಡಿದೆ. ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೇ ಇದರ ಅಧ್ಯಕ್ಷರಾಗಿದ್ದು, ಚೀನಾ ಸೇನೆಯ ಒಟ್ಟು ಮುಖ್ಯಸ್ಥರಾಗಿದ್ದಾರೆ.

ಹೊಸ ಕಾಯ್ದೆಯು ದೇಶೀಯ ಮತ್ತು ಅಂತರರಾಷ್ಟ್ರೀಯ ಹಂತದಲ್ಲಿ ರಾಷ್ಟ್ರೀಯ ಭದ್ರತೆ ಮತ್ತು ಹಿತಾಸಕ್ತಿ ದೃಷ್ಟಿಯಿಂದ ಮಿಲಿಟರಿ ಮತ್ತು ನಾಗರಿಕ ಸಂಪನ್ಮೂಲವನ್ನು ಕ್ರೋಡಿಕರಿಸಲು ಸಿಎಂಸಿಗೆ ಅಧಿಕಾರ ನೀಡಲಿದೆ. ದೊಡ್ಡ ಪ್ರಮಾಣದಲ್ಲಿ ವೇತನ ಏರಿಕೆ ಹಿಂದೆ ಸ್ಥಳೀಯ ಪ್ರತಿಭಾವಂತ, ಪ್ರತಿಭೆಗಳನ್ನು ಸೆಳೆಯುವ ಗುರಿ ಇದೆ.

ವೇತನ ಪರಿಷ್ಕರಣೆ ನಂತರ ನಾನು ಹೆಚ್ಚುವರಿಯಾಗಿ ಸುಮಾರು ₹ 72 ಸಾವಿರ ಅನ್ನು (1000 ಡಾಲರ್) ಪಡೆಯಲಿದ್ದೇನೆ ಎಂದು ಹೆಸರು ಉಲ್ಲೇಖಿಸದೇ ಬೀಜಿಂಗ್ ಮೂಲದ ಕರ್ನಲ್‌ ಒಬ್ಬರ ಹೇಳಿಕೆಯನ್ನು ವರದಿ ಉಲ್ಲೇಖಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.