ADVERTISEMENT

ಸ್ವೀಡನ್‌ನಲ್ಲಿ ಕುರಾನ್‌ ಪ್ರತಿಗೆ ಬೆಂಕಿ: ಕಲ್ಲು ತೂರಾಟ

ಎಪಿ
Published 4 ಸೆಪ್ಟೆಂಬರ್ 2023, 15:51 IST
Last Updated 4 ಸೆಪ್ಟೆಂಬರ್ 2023, 15:51 IST
   

ಸ್ಟಾಕ್‌ಹೋಮ್‌: ಮುಸ್ಲಿಂ ವಿರೋಧಿ ಪ್ರತಿಭಟನಕಾರರು ಕುರಾನ್‌ ಪ್ರತಿಯನ್ನು ಸುಟ್ಟ ನಂತರ ಇಲ್ಲಿ ಸಂಘರ್ಷ ಮತ್ತಷ್ಟು ಭುಗಿಲೆದ್ದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದರು.

ಉದ್ರಿಕ್ತ ಗುಂಪು ಪೊಲೀಸರ ವಿರುದ್ಧವೂ ಕಲ್ಲು ತೂರಾಟ ನಡೆಸಿದೆ. ಹಲವು ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಮಾಲ್ಮೊ ಪೊಲೀಸರು ಹೇಳಿದರು.

ಮುಸ್ಲಿಂ ವಿರೋಧಿ ಕಾರ್ಯಕರ್ತ ಸಲ್ವಾನ್‌ ಮೊಮಿಕಾ ಅವರು ಭಾನುವಾರ ಕುರಾನ್ ಪ್ರತಿಯೊಂದನ್ನು ಸುಟ್ಟ ನಂತರ ಸಂಘರ್ಷ ಆರಂಭವಾಗಿದೆ. ಉದ್ರಿಕ್ತ ಗುಂಪು ಮೊಮಿಕಾ ಅವರನ್ನು ತಡೆಯಲು ಯತ್ನಿಸಿತು. ಪೊಲೀಸರು ಮೂವರನ್ನು ಬಂಧಿಸಿದ್ದಾರೆ. 

ADVERTISEMENT

ಆದರೆ, ಸೋಮವಾರ ಮುಂಜಾನೆ ಉದ್ರಿಕ್ತ ಯುವ ಜನರ ಗುಂಪು ಟೈರ್‌ ಮತ್ತಿತರ ವಸ್ತುಗಳಿಗೆ ಬೆಂಕಿ ಹಚ್ಚಿತು. ಕೆಲವರು ವಿದ್ಯುತ್ ಚಾಲಿತ ಸ್ಕೂಟರ್‌, ಸೈಕಲ್‌ಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು ಎಂದು ಹೇಳಿದರು.

ಕುರಾನ್‌ಗೆ ಬೆಂಕಿ ಹಚ್ಚುವುದನ್ನು ನಿಲ್ಲಿಸಲು ಮಾರ್ಗಗಳನ್ನು ಕಂಡುಹಿಡಿಯುವಂತೆ ಸ್ವೀಡನ್ ನ ಮುಸ್ಲಿಂ ನಾಯಕರು ಸರ್ಕಾರಕ್ಕೆ ಕರೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.