ಶರ್ಮ್ ಎಲ್–ಶೇಖ್ (ಈಜಿಪ್ಟ್): ಪಳೆಯುಳಿಕೆ ಇಂಧನಗಳ ಬಳಕೆಯಿಂದ ಭೂಮಿಯ ತಾಪಮಾನ ಅಪಾಯಕಾರಿ ಮಟ್ಟಕ್ಕೆ ಹೆಚ್ಚಳವಾಗುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದರೂ, ಕೆಲ ಜಾಗತಿಕ ನಾಯಕರು ಈ ಇಂಧನಗಳಿಗೆ ಸಂಬಂಧಿಸಿದ ಯೋಜನೆಗಳನ್ನು ಬೆಂಬಲಿಸುತ್ತಿದ್ದಾರೆ ಎಂದು ಹವಾಮಾನ ಬದಲಾವಣೆ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಹವಾಮಾನ ಶೃಂಗಸಭೆಯ ಗೋಷ್ಠಿಯೊಂದರಲ್ಲಿ ಮಾತನಾಡಿದ ಉಗಾಂಡದ ಹೋರಾಟಗಾರ್ತಿ ವೆನೆಸ್ಸಾ ನಕಾಟೆ, ‘ಪಳೆಯುಳಿಕೆ ಇಂಧನಗಳ ಯೋಜನೆಗಳ ಬಗ್ಗೆಯೇ ಅನೇಕ ನಾಯಕರ ಗಮನ ಕೇಂದ್ರೀಕೃತವಾಗಿದೆ’ ಎಂದು ಟೀಕಿಸಿದರು.
‘ಮುಂಬರುವ ಚುನಾವಣೆಯಲ್ಲಿ ಗೆಲ್ಲಬೇಕು ಹಾಗೂ ಇರುವ ಅಲ್ಪಸಮಯದಲ್ಲಿಯೇ ಸಾಧ್ಯವಿರುವಷ್ಟು ಲಾಭ ಮಾಡಿಕೊಳ್ಳಬೇಕು’ ಎಂಬುದೇ ಈ ನಾಯಕರ ಉದ್ದೇಶ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.