ADVERTISEMENT

ಹವಾಮಾನ ವೈಪರೀತ್ಯ ಪರಿಣಾಮ ಎದುರಿಸಲು ಭಾರತದ ಕರಾವಳಿ ಭಾಗಕ್ಕೆ ₹318 ಕೋಟಿ ಅನುದಾನ

ವಿಶ್ವಸಂಸ್ಥೆ ನೆರವು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2018, 13:16 IST
Last Updated 22 ಅಕ್ಟೋಬರ್ 2018, 13:16 IST
   

ಮನಾಮ: ಜಾಗತಿಕ ಹವಾಮಾನ ವೈಪರೀತ್ಯದ ತೀವ್ರ ಪರಿಣಾಮಗಳನ್ನು ಎದುರಿಸಲು ಹಾಗೂ ಅದರಿಂದ ಚೇತರಿಸಿಕೊಳ್ಳುವ ಸಲುವಾಗಿ ವಿಶ್ವಸಂಸ್ಥೆಯು ಭಾರತದ ಕರಾವಳಿ ಭಾಗಕ್ಕೆ ಸುಮಾರು ₹318 ಕೋಟಿ ನೆರವು ಮಂಜೂರು ಮಾಡಿದೆ.

ಹವಾಮಾನ ವೈಪರೀತ್ಯವನ್ನು ಎದುರಿಸಲು ಅಭಿವೃದ್ಧಿಶೀಲ ದೇಶಗಳ ಒಟ್ಟು 19 ಯೋಜನೆಗಳಿಗೆ ಸುಮಾರು ₹7,400 ಕೋಟಿ (1 ಬಿಲಿಯನ್ ಯುಎಸ್‌ಡಿ) ಹವಾಮಾನ ನಿಧಿ ನೆರವು ನೀಡಲಾಗಿದೆ.

ಬಹರೇನ್‌ನಲ್ಲಿ ನಡೆದ 21ನೇ ಹಸಿರು ಪರಿಸರ ನಿಧಿ (ಜಿಸಿಎಫ್‌) ಮಂಡಳಿಯ ಸಭೆಯಲ್ಲಿ ಮೊದಲ ನಿಧಿ ಬಿಡುಗಡೆಗೆ ಅನುಮೋದನೆ ನೀಡಲಾಯಿತು.

ADVERTISEMENT

ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮವು (ಯುಎನ್‌ಡಿಪಿ) ಈ ಯೋಜನೆಯನ್ನು ಬೆಂಬಲಿಸಿದೆ. ಪ್ಯಾರಿಸ್ ಒಪ್ಪಂದ ಹಾಗೂ 2030ರ ವೇಳೆಗೆ ಸುಸ್ಥಿರ ಅಭಿವೃದ್ಧಿ ಸಾಧಿಸುವ ಭಾರತದ ಗುರಿ ಸಾಧನೆಗೆ ಇದು ಅತ್ಯಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.