ADVERTISEMENT

ಮೊದಲ ಕ್ಲೋನಿಂಗ್ ಸಸ್ತನಿ ಡಾಲಿ ಸೃಷ್ಟಿಯ ವಿಜ್ಞಾನಿ ಸರ್ ವಿಲ್ಮಟ್‌ ನಿಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಸೆಪ್ಟೆಂಬರ್ 2023, 13:58 IST
Last Updated 13 ಸೆಪ್ಟೆಂಬರ್ 2023, 13:58 IST
<div class="paragraphs"><p>ಡಾಲಿಯೊಂದಿಗೆ&nbsp;ಪ್ರೊ. ಸರ್ ಐಯಾನ್ ವಿಲ್ಮಟ್‌</p></div>

ಡಾಲಿಯೊಂದಿಗೆ ಪ್ರೊ. ಸರ್ ಐಯಾನ್ ವಿಲ್ಮಟ್‌

   

ಎಕ್ಸ್‌ ಚಿತ್ರ

ಲಂಡನ್: ಮೃತ ಕುರಿಯ ಸಸ್ತನಿ ಗ್ರಂಥಿಯಿಂದ ತದ್ರೂಪು ಕುರಿಯ ಜನನಕ್ಕೆ ಕಾರಣವಾದ ಕ್ಲೋನಿಂಗ್‌ ತಂತ್ರಜ್ಞಾನವನ್ನು ಮೊದಲ ಬಾರಿಗೆ ಪ್ರಯೋಗಿಸಿ ಡಾಲಿ ಎಂಬ ಕುರಿಯ ಜನನಕ್ಕೆ ಕಾರಣವಾದ ವಿಜ್ಞಾನಿ ಪ್ರೊ. ಸರ್ ಐಯಾನ್ ವಿಲ್ಮಟ್‌ (79) ನಿಧನರಾಗಿದ್ದಾರೆ.

ADVERTISEMENT

ಕ್ಲೋನಿಂಗ್ ಕ್ಷೇತ್ರದಲ್ಲಿನ ಇವರ ನಿರಂತರ ಸಂಶೋಧನೆಯ ಫಲವಾಗಿ 1996ರಲ್ಲಿ ಡಾಲಿ ಎಂಬ ತದ್ರೂಪು ಕುರಿಯ ಜನನವಾಗಿತ್ತು. ಅದರ ಹುಟ್ಟಿಗೆ ಮೃತ ಕುರಿಯ ಗ್ರಂಥಿಯಲ್ಲಿನ ಕೋಶವೇ ಮೂಲವಾಗಿತ್ತು. ಎಡಿನ್‌ಬರ್ಗ್‌ನಲ್ಲಿದ್ದ ರೋಸ್ಲಿನ್‌ ಸಂಸ್ಥೆಯಲ್ಲಿ ವಿಜ್ಞಾನಿಯಾಗಿದ್ದ ಸರ್ ವಿಲ್ಮಟ್ ಅವರು, ಆಯಸ್ಸು ಹೆಚ್ಚಿಸುವ ಔಷಧಗಳ ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ವಯಸ್ಕ ಕುರಿಯ ಡಿಎನ್‌ಎ ಅನ್ನು ಮತ್ತೊಂದು ಕುರಿಯ ಅಂಡಾಶಯದೊಳಗೆ ಸೇರಿಸುವ ಕ್ಲೋನಿಂಗ್ ತಂತ್ರಜ್ಞಾನ ಇದಾಗಿತ್ತು. ನಂತರ ಇದಕ್ಕೆ ವಿದ್ಯುತ್‌ ಪೂರೈಕೆಯ ಜತೆಗೆ ಕೆಲ ರಾಸಾಯನಿಕಗಳನ್ನೂ ಸೇರಿಸಲಾಗಿತ್ತು. ಇದರಿಂದಾಗಿ ಈ ಡಿಎನ್ಎ ಮುಂದೆ ಭ್ರೂಣವಾಗಿ ಪರಿವರ್ತನೆಯಾಯಿತು. ನಂತರ ಅದನ್ನು ಬಾಡಿಗೆ ತಾಯಿ (ಮತ್ತೊಂದು ಕುರಿ) ಯ ಗರ್ಭಕ್ಕೆ ಸೇರಿಸಲಾಗಿತ್ತು. 20ನೇ ಶತಮಾನದ ಅತಿ ದೊಡ್ಡ ಆವಿಷ್ಕಾರ ಎಂದೇ ಈ ಪ್ರಯೋಗವನ್ನು ಬಣ್ಣಿಸಲಾಗಿತ್ತು.

ಸರ್ ವಿಲ್ಮಟ್ ನಿಧನಕ್ಕೆ ಜಗತ್ತಿನ ವಿಜ್ಞಾನಿಗಳು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಶೋಕ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.