ಬರ್ಲಿನ್: ಜರ್ಮನಿಯಲ್ಲಿ 16 ವರ್ಷಗಳ ಕಾಲ ಆಡಳಿತ ನಡೆಸಿದ ಚಾನ್ಸಲರ್ ಅಂಗೆಲಾ ಮೆರ್ಕೆಲ್ ಅವರ ಉತ್ತರಾಧಿಕಾರಿ ಯಾರಾಗಲಿದ್ದಾರೆ ಎಂಬುದನ್ನು ಭಾನುವಾರ ನಡೆದ ಸಂಸತ್ ಚುನಾವಣೆ ನಿರ್ಧರಿಸಲಿದೆ.
ಜರ್ಮನಿಯ ಅಭಿವೃದ್ಧಿಯಲ್ಲಿ ‘ಉಕ್ಕಿನ ಮಹಿಳೆ’ ಎನಿಸಿಕೊಂಡಿದ್ದ ಅಂಗೆಲಾ ಮೆರ್ಕೆಲ್ ಅವರ ಕೊಡುಗೆ ದೊಡ್ದದು. ಚುನಾವಣೆಯಲ್ಲಿ ಮರ್ಕೆಲ್ ಸ್ಪರ್ಧಿಸುತ್ತಿಲ್ಲ.
ಮೆರ್ಕೆಲ್ ಅವರ ಕ್ರಿಶ್ಚಿಯನ್ ಡೆಮಾಕ್ರಟಿಕ್ ಯೂನಿಯನ್ ಪಕ್ಷವು ಅರ್ಮಿನ್ ಲಾಸ್ಚೆಟ್ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ.
ಇತ್ತೀಚಿನ ಚುನಾವಣಾ ಸಮೀಕ್ಷೆಯ ಪ್ರಕಾರ, ಚುನಾವಣೆಯಲ್ಲಿಸೆಂಟರ್–ರೈಟ್ ಯೂನಿಯನ್ ಬಣ ಹಾಗೂ ಸೆಂಟರ್ ಲೆಫ್ಟ್ ಸೋಷಿಯಲ್ ಡೆಮಾಕ್ರಟಿಕ್ ನಡುವೆ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. ಪರಿಸರವಾದಿ ಅನ್ನಲೇನಾ ಬೇರ್‌ಬಾಕ್ ಅವರು ಮೊದಲ ಬಾರಿಗೆ ಚಾನ್ಸಲರ್ ಹುದ್ದೆಗಾಗಿ ಸ್ಪರ್ಧಿಸುತ್ತಿದ್ದಾರೆ. ಆದರೆ, ಅವರು ಚುನಾವಣೆಯಲ್ಲಿ ಮೂರನೇ ಸ್ಥಾನವನ್ನು ತಲುಪುವುದು ಕೂಡಾ ಅನುಮಾನ ಎನ್ನಲಾಗಿದೆ.
ಚುನಾವಣೆಯಲ್ಲಿ ಯಾವುದೇ ಪಕ್ಷವು ಸಂಪೂರ್ಣ ಬಹುಮತ ಪಡೆಯುವ ನಿರೀಕ್ಷೆ ಇಲ್ಲ ಎಂದೂ ಸಮೀಕ್ಷೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.