ADVERTISEMENT

ಶ್ವೇತಭವನ ವಿರುದ್ಧ ಸಿಎನ್‌ಎನ್‌ ದಾವೆ

ಏಜೆನ್ಸೀಸ್
Published 13 ನವೆಂಬರ್ 2018, 16:42 IST
Last Updated 13 ನವೆಂಬರ್ 2018, 16:42 IST

ವಾಷಿಂಗ್ಟನ್‌: ಸಂಸ್ಥೆಯ ಪತ್ರಕರ್ತ ಜಿಮ್‌ ಅಕೋಸ್ಟಾ ಅವರ ಪತ್ರಿಕಾ ಮಾನ್ಯತೆಯನ್ನು ರದ್ದು ಮಾಡಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತದ ಕ್ರಮವನ್ನು ಖಂಡಿಸಿರುವ ಸಿಎನ್‌ಎನ್‌, ಶ್ವೇತಭವನದ ವಿರುದ್ಧ ಮಂಗಳವಾರಮೊಕದ್ದಮೆ ಹೂಡಿದೆ.

‘ಟ್ರಂಪ್‌ ಹಾಗೂ ಪತ್ರಕರ್ತ ಜಿಮ್‌ ನಡುವೆ ವಾಗ್ವಾದ ನಡೆಯಿತು. ಇದೇ ಕಾರಣವನ್ನು ಮುಂದಿಟ್ಟುಕೊಂಡು ಶ್ವೇತಭವನ ಜಿಮ್‌ ಅವರ ಮಾನ್ಯತೆಯನ್ನು ರದ್ದುಪಡಿಸಿದೆ. ಇದು ಸಂಸ್ಥೆ ಹಾಗೂ ಪತ್ರಕರ್ತನ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ’ ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT