ಕಿನ್ಶಾಸಾ ( ಕಾಂಗೋ): ಭಾರಿ ಮಳೆಯಿಂದಾಗಿ ನೈಋತ್ಯ ಕಾಂಗೋದಲ್ಲಿ ಭೂಕುಸಿತ ಸಂಭವಿಸಿದೆ. ಘಟನೆಯಲ್ಲಿ ಕನಿಷ್ಠ 15 ಜನರು ಮೃತಪಟ್ಟು, 60 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಇಡಿಯೋಫಾ ಪಟ್ಟಣದ ಬಳಿಯ ಬಂದರಿನ ಬಳಿ ಭಾನುವಾರ ಘಟನೆ ನಡೆದಿದ್ದು, 7 ಜನರನ್ನು ರಕ್ಷಿಸಲಾಗಿದೆ. ಬಂದರಿನ ಮೇಲೆ ಬೆಟ್ಟವಿದ್ದು, ಭಾರಿ ಮಳೆಯಿಂದ ಭೂಕುಸಿತ ಸಂಭವಿಸಿದೆ ಎಂದು ಸ್ಥಳೀಯ ಉಪ ಚುನಾಯಿತ ಅಧಿಕಾರಿ ಧೆಡೆ ಮುಪಾಸಾ ತಿಳಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅವಶೇಷಗಳ ಅಡಿಯಲ್ಲಿ ಸಿಲುಕಿರುವವರ ರಕ್ಷಣೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈವರೆಗೆ ರಕ್ಷಿಸಲ್ಪಟ್ಟ 7 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ 60ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿರುವ ಶಂಕೆಯಿದೆ ಎಂದು ಪ್ರಾಂತೀಯ ಹಂಗಾಮಿ ಗವರ್ನರ್ ಫೆಲಿಸಿಯನ್ ಕಿವೇ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.