ವಾಷಿಂಗ್ಟನ್: ಕಳೆದ ವಾರ ಅಮೆರಿಕದ ಟೆಕ್ಸಾಸ್‌ನಲ್ಲಿ ನಾಲ್ವರು ಭಾರತೀಯ–ಅಮೆರಿಕನ್ನರ ಮೇಲೆ ಜನಾಂಗೀಯ ದಾಳಿ ನಡೆಸಿದ ಮಹಿಳೆಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಭಾರತೀಯ ಮೂಲದ ಸಂಸದ ರಾಜಾ ಕೃಷ್ಣಮೂರ್ತಿ ಅವರು ಪೊಲೀಸರನ್ನು ಒತ್ತಾಯಿಸಿದ್ದಾರೆ.
ಇಂತಹ ದಾಳಿಗಳು ಅವರಿಂದ ಸಂತ್ರಸ್ತರಿಗೆ ಮಾತ್ರವಲ್ಲದೇ ಒಟ್ಟಾರೆ ಭಯ, ಆತಂಕದ ವಾತಾವರಣ ಮೂಡಿಸಲಿದ್ದು, ಒಟ್ಟಾರೆ ಸಮುದಾಯದ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.
ಟೆಕ್ಸಾಸ್‌ನ ಪಾರ್ಕಿಂಗ್ ಪ್ರದೇಶದಲ್ಲಿ ಮೆಕ್ಸಿಕೊ ಮೂಲದ ಮಹಿಳೆಯು ನಾಲ್ವರು ಭಾರತೀಯ–ಅಮೆರಿಕ ಮಹಿಳೆಯರಿಗೆ ನಿಂದಿಸಿದ್ದರು. ನಂತರ ಹಲ್ಲೆ ನಡೆಸಿ, ಭಾರತಕ್ಕೆ ಮರಳಲು ಒತ್ತಾಯಿಸಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹಂಚಿಕೆಯಾಗಿತ್ತು. ಬಳಿಕ ಪೊಲೀಸರು ಮಹಿಳೆಯನ್ನು ಬಂಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.