ಹನೋಯಿ: ಹಿಂದೂ ಮಹಾಸಾಗರ–ಪೆಸಿಫಿಕ್ ಪ್ರದೇಶದಲ್ಲಿನ ಸಹಕಾರವು ಭಾರತ ಮತ್ತು ವಿಯೆಟ್ನಾಂ ದೇಶಗಳ ಪಾಲುದಾರಿಕೆಯನ್ನು ಒಳಗೊಂಡಿದೆ ಎಂದು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಸೋಮವಾರ ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಆಸಿಯಾನ್ ಮಹತ್ವ ಮತ್ತು ಕ್ವಾಡ್ ರಾಷ್ಟ್ರಗಳ ಕೂಟದ ಕೊಡುಗೆಗಳ ಬಗ್ಗೆ ಒತ್ತಿ ಹೇಳಿದರು.
ನಾಲ್ಕು ದಿನಗಳ ವಿಯೆಟ್ನಾಂ ಪ್ರವಾಸಕ್ಕೆ ಭಾನುವಾರ ಇಲ್ಲಿಗೆ ಬಂದಿರುವ ಅವರು, ಹಿಂದೂ ಮಹಾಸಾಗರ–ಪೆಸಿಫಿಕ್ ವಿಚಾರದ ಕುರಿತು ವಿಯೆಟ್ನಾಂನ ರಾಜತಾಂತ್ರಿಕ ಅಕಾಡೆಮಿಯಲ್ಲಿ ಭಾಷಣ ಮಾಡಿದರು. ಇದಕ್ಕೂ ಮುನ್ನ ಜೈಶಂಕರ್ ಅವರು ವಿಯೆಟ್ನಾಂ ವಿದೇಶಾಂಗ ಸಚಿವ ಬುಯಿ ಥನ್ಹಾ ಸನ್ ಅವರನ್ನು ಭೇಟಿ ಮಾಡಿ, ವಾಣಿಜ್ಯ, ಇಂಧನ, ರಕ್ಷಣೆ ಮತ್ತು ಕಡಲ ತೀರದ ಭದ್ರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.