ಜಕಾರ್ತ: ಇಂಡೋನೇಷ್ಯಾದಲ್ಲಿ ನಡೆದ ಚುನಾವಣೆ ನಂತರಮತಪತ್ರವನ್ನು ಎಣಿಸುವ ಕಾರ್ಯದಲ್ಲಿ ನಿರತರಾಗಿದ್ದ 270 ಸಿಬ್ಬಂದಿವಿಪರೀತ ಕೆಲಸದೊತ್ತಡದಿಂದ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಹತ್ತು ದಿನಗಳ ಹಿಂದೆ ಇಲ್ಲಿಮತದಾನ ಪ್ರಕ್ರಿಯೆ ನಡೆದಿತ್ತು. ಒಂದು ದಿನದಲ್ಲಿ ನಡೆದ ಜಗತ್ತಿನ ಅತಿದೊಡ್ಡ ಮತದಾನ ಪ್ರಕ್ರಿಯೆ ಇದಾಗಿತ್ತು. 260 ದಶಲಕ್ಷ ಜನರಿರುವ ಈ ರಾಷ್ಟ್ರದಲ್ಲಿ ಏಪ್ರಿಲ್ 17ರಂದು ಅಧ್ಯಕ್ಷೀಯ ಚುನಾವಣೆ, ರಾಷ್ಟ್ರೀಯ ಮತ್ತು ಸಂಸದೀಯ ಚುನಾವಣೆಗಳು ನಡೆದಿತ್ತು.
ಖರ್ಚು ಉಳಿಸುವುದಕ್ಕಾಗಿ ಎಲ್ಲ ಚುನಾವಣೆಗಳನ್ನುಒಂದೇ ದಿನ ನಡೆಸಲಾಗಿತ್ತು.ಇಲ್ಲಿ 193 ದಶಲಕ್ಷ ಮತದಾರುಇದ್ದು 800,000 ಮತಗಟ್ಟೆಗಳಲ್ಲಿ ಪ್ರತಿಯೊಬ್ಬ ಮತದಾರನೂ 5 ಮತಪತ್ರ ಬಳಸಿ ಮತದಾನ ಮಾಡಿದ್ದಾರೆ.
ಮತದಾನ ಶಾಂತಿಯುವಾಗಿ ನೆರವೇರಿದ್ದು, ಶೇ.80ರಷ್ಟು ಮತದಾನವಾಗಿದೆ.
ಆದರೆ ಎಂಟು ಗಂಟೆಗಳ ಕಾಲ ನಡೆದ ಮತದಾನ ಪ್ರಕ್ರಿಯೆ ಬಳಿಕ ಪಶ್ಚಿಮ ಭಾಗದಿಂದ ಪೂರ್ವಭಾಗಕ್ಕೆ ಸುಮಾರು 5000 ಕಿಮೀ ಪ್ರಯಾಣ ಮಾಡಿದ್ದು ಚುನಾವಣಾ ಸಿಬ್ಬಂದಿಹೈರಾಣಾಗುವಂತೆ ಮಾಡಿತ್ತು. ಬಹುದೂರ ನಡೆದಿದ್ದರಿಂದ ಹಲವರು ಹರ್ಕ್ಯುಲೇನವ್ ಲಾಜಿಸ್ಟಿಕ್ ಫೀಟ್‌ನಿಂದ ಬಳಲಿದರೆ ಇನ್ನು ಕೆಲವರು ಸುಸ್ತಾಗಿ ಕಂಗಾಲಾಗಿದ್ದರು.
ಈ ಸಿಬ್ಬಂದಿಮತಪತ್ರವನ್ನು ಕೈಯಲ್ಲೇ ಎಣಿಸುತ್ತಿದ್ದು ಅಧಿಕ ಕೆಲಸದೊತ್ತಡದಿಂದಾಗಿ ಶನಿವಾರ ರಾತ್ರಿ 272 ಮಂದಿ ಸಾವಿಗೀಡಾಗಿದ್ದಾರೆ. ಏತನ್ಮಧ್ಯೆ 1,878 ಮಂದಿ ಅಸ್ವಸ್ಥರಾಗಿದ್ದಾರೆ ಎಂದು ಸಾರ್ವತ್ರಿಕ ಚುನಾವಣಾ ಆಯೋಗದ (ಕೆಪಿಯು) ವಕ್ತಾರ ಅರೀಫ್ ಪ್ರಿಯೊ ಸುಸಾಂಟೊ ಹೇಳಿದ್ದಾರೆ.
ಅನಾರೋಗ್ಯ ಪೀಡಿತ ಸಿಬ್ಬಂದಿಗಳಿಗೆ ವೈದ್ಯಕೀಯ ಸೌಲಭ್ಯ ನೀಡಬೇಕು ಎಂದು ಆರೋಗ್ಯ ಸಚಿವಾಲಯ ಏಪ್ರಿಲ್ 23ರಂದು ಸುತ್ತೋಲೆ ಹೊರಡಿಸಿತ್ತು.ಏತನ್ಮಧ್ಯೆ, ಸಾವಿಗೀಡಾದ ವ್ಯಕ್ತಿಗಳ ಕುಟುಂಬಕ್ಕೆ ಪರಿಹಾರ ಧನ ನೀಡುವ ಕಾರ್ಯವನ್ನು ವಿತ್ತ ಸಚಿವಾಲಯ ಮಾಡುತ್ತಿದೆ ಎಂದಿದ್ದಾರೆ ಸುಸಾಂಟೊ.
ಸಿಬ್ಬಂದಿಸಾವಿನ ಸಂಖ್ಯೆ ಏರುತ್ತಿದ್ದಂತೆ ಕೆಪಿಯು ವಿರುದ್ದ ತೀವ್ರ ಟೀಕೆ ಕೇಳಿಬರುತ್ತಿದೆ.
ಸಿಬ್ಬಂದಿಗೆಕೆಲಸವನ್ನು ವಹಿಸಿಕೊಡಲು ಕೆಪಿಯುಗೆ ತಿಳಿದಿಲ್ಲ ಎಂದು ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ನಾಯಕ ಪ್ರಬೊವೊ ಸುಬಿಯಂಟೊ ಅವರ ಪ್ರಚಾರ ಕಾರ್ಯದ ಉಪ ಅಧ್ಯಕ್ಷ ಅಹ್ಮದ್ ಮುಜಾನಿ ಹೇಳಿರುವುದಾಗಿ ಕುಂಪಾರನ್ ಡಾಟ್ ಕಾಮ್ ವರದಿ ಮಾಡಿದೆ.
ಇಲ್ಲಿವರೆಗೆ ನಡೆದ ಮತ ಎಣಿಕೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿರುವ ಪ್ರಬೊವೊಗೆ ಹಿನ್ನಡೆಯಾಗಿದೆ.ಅಧ್ಯಕ್ಷ ಜೊಕೊ ವಿಡೊಡೊ ಅವರು ಈ ಚುನಾವಣೆಯಲ್ಲಿ ಮೋಸ ಮಾಡಿದ್ದು ಕೆಲವು ಚುನಾವಣಾ ಸಿಬ್ಬಂದಿವಿಡೊಡೊ ಪರ ಮತದಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಆರೋಪಗಳೆಲ್ಲಾ ಸತ್ಯಕ್ಕೆ ದೂರವಾದುದು ಎಂದು ವಿಡೊಡೊ ಅವರ ರಕ್ಷಣಾ ಸಚಿವ ಹೇಳಿದ್ದಾರೆ.
ಇಬ್ಬರು ಅಭ್ಯರ್ಥಿಗಳು ತಾವೇ ವಿಜಯಿ ಎಂದು ಘೋಷಿಸಿಕೊಂಡಿದ್ದರೂ, ತ್ವರಿತ ಎಣಿಕೆಯ ಫಲಿತಾಂಶ ಬಂದಾಗ ವಿಡೊಡೊ ಮುನ್ನಡೆ ಸಾಧಿಸಿದ್ದಾರೆ. ಮೇ 22ರಂದು ಅಧ್ಯಕ್ಷ ಮತ್ತು ಸಂಸದೀಯ ಚುನಾವಣೆಗಳ ಫಲಿತಾಂಶ ಹೊರಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.