ವಾಷಿಂಗ್ಟನ್: ಗ್ರೀನ್ ಕಾರ್ಡ್ ಹಂಚಿಕೆಗೆ ಸಂಬಂಧಿಸಿ ದೇಶವಾರು ಮಿತಿ ವ್ಯವಸ್ಥೆ ಜಾರಿಯಲ್ಲಿ ಇರುವುದರಿಂದ ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸಲು ಅಗತ್ಯವಿರುವ ಈ ಕಾರ್ಡ್ ಪಡೆಯಲು ಭಾರತ, ಚೀನಾ ಸೇರಿದಂತೆ ಹಲವು ದೇಶಗಳ ಪ್ರಜೆಗಳು ವರ್ಷಗಟ್ಟಲೇ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರೀನ್ ಕಾರ್ಡ್ ಹಂಚಿಕೆ ವ್ಯವಸ್ಥೆಯಲ್ಲಿ ಸಂಸತ್ ಬದಲಾವಣೆ ತಂದರೆ ಮಾತ್ರ ಈ ದೀರ್ಘವಾದ ಮತ್ತು ಯಾತನೆಯಿಂದ ಕೂಡಿದ ಕಾಯುವ ಪರಿಸ್ಥಿತಿ ನಿವಾರಣೆಯಾಗಬಲ್ಲದು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸದ್ಯ ಜಾರಿಯಲ್ಲಿರುವ ಕಾನೂನಿನ ಪ್ರಕಾರ, ಉದ್ಯೋಗ ಆಧರಿಸಿ, ಪ್ರತಿ ವರ್ಷ 1.40 ಲಕ್ಷ ಗ್ರೀನ್ ಕಾರ್ಡ್‌ಗಳನ್ನು ವಿತರಿಸಲಾಗುತ್ತಿದೆ. ಒಂದು ದೇಶಕ್ಕೆ ಒಟ್ಟು ಕಾರ್ಡ್‌ಗಳಲ್ಲಿ ಶೇ 7ರಷ್ಟು ಗ್ರೀನ್ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಇದೇ ಕಾರಣಕ್ಕೆ ಗ್ರೀನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದವರು ದೀರ್ಘ ಕಾಲದ ವರೆಗೆ ಕಾಯಬೇಕಾದ ಪರಿಸ್ಥಿತಿ ಇದೆ.
‘ಕುಟುಂಬ ಪ್ರಾಯೋಜಿತ ಗ್ರೀನ್‌ಕಾರ್ಡ್‌ಗಳ ಸಂಖ್ಯೆಯನ್ನು 2,26,000 ಎಂದು ನಿಗದಿ ಮಾಡಲಾಗಿದೆ. ಅದೇ, ಉದ್ಯೋಗ ಆಧಾರಿತ ಗ್ರೀನ್ ಕಾರ್ಡುಗಳ ಸಂಖ್ಯೆ 1.40 ಲಕ್ಷ ಇದೆ. ಇದರ ಜೊತೆಗೆ ದೇಶವಾರು ಮಿತಿ ಶೇ 7ರಷ್ಟಿದೆ. ಈ ಎಲ್ಲ ಕಾರಣಗಳಿಂದ ಗ್ರೀನ್ ಕಾರ್ಡ್ ಪಡೆಯಲು ಬಹಳ ವರ್ಷಗಳ ಕಾಲ ಕಾಯಬೇಕಾಗುತ್ತದೆ’ ಎಂದು ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳ (ಯುಎಸ್‌ಸಿಐಎಸ್) ವಿಭಾಗದ ಹಿರಿಯ ಸಲಹೆಗಾರ ಡಗ್ಲಾಸ್ ರ‍್ಯಾಂಡ್ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.