ADVERTISEMENT

ಸಲಿಂಗಿಗಳ ವಿವಾಹ ನಿಷೇಧ ಅಸಾಂವಿಧಾನಿಕ; ಜಪಾನ್‌ ಕೋರ್ಟ್‌ನಿಂದ ಮಹತ್ವದ ತೀರ್ಪು

ಏಜೆನ್ಸೀಸ್
Published 17 ಮಾರ್ಚ್ 2021, 7:33 IST
Last Updated 17 ಮಾರ್ಚ್ 2021, 7:33 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಟೋಕಿಯೊ: ಸಲಿಂಗಿಗಳ ವಿವಾಹವನ್ನು ನಿಷೇಧಿಸಿರುವ ಸರ್ಕಾರದ ಕ್ರಮ ಅಸಾಂವಿಧಾನಿಕ ಎಂದು ಜಪಾನ್‌ನ ಸಪ್ಪೋರೊ ಜಿಲ್ಲಾ ಕೋರ್ಟ್‌ ಬುಧವಾರ ತೀರ್ಪು ನೀಡಿದೆ.

ಸಲಿಂಗಿಗಳ ವಿವಾಹಕ್ಕೆ ಕಾನೂನು ಮಾನ್ಯತೆ ನೀಡದ ಏಳು ದೇಶಗಳ ಗುಂಪಿನ ಸದಸ್ಯ ರಾಷ್ಟ್ರವಾಗಿರುವ ಜಪಾನ್‌ನಲ್ಲಿ ಇದೇ ಮೊದಲ ಬಾರಿಗೆ ಸಲಿಂಗಿಗಳ ಹಕ್ಕುಗಳನ್ನು ಎತ್ತಿ ಹಿಡಿದಂತಾಗಿದೆ.

ಸರ್ಕಾರ ತಮಗೆ ಪರಿಹಾರ ನೀಡಬೇಕು ಎಂಬ ಅರ್ಜಿದಾರರ ಕೋರಿಕೆಯನ್ನು ಕೋರ್ಟ್‌ ವಜಾಗೊಳಿಸಿದೆ. ‘ವಿವಾಹವಾಗುವುದರಿಂದ ಲಭಿಸುವ ಕಾನೂನುಬದ್ಧ ಪ್ರಯೋಜನಗಳು ಭಿನ್ನಲಿಂಗಿಗಳಂತೆ ಸಲಿಂಗಿ ದಂಪತಿಗೂ ಸಿಗಬೇಕು’ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

ADVERTISEMENT

ತಮ್ಮ ವಿವಾಹಕ್ಕೆ ಮಾನ್ಯತೆ ನೀಡಬೇಕು ಎಂದು ಕೋರಿ ಸಾಕಷ್ಟು ಸಂಖ್ಯೆಯ ಸಲಿಂಗಿ ಜೋಡಿಗಳು ಅರ್ಜಿ ಸಲ್ಲಿಸಿದ್ದು, ಈ ತೀರ್ಪಿನಿಂದ ಅರ್ಜಿದಾರರಿಗೆ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.