ವಾಷಿಂಗ್ಟನ್: ಜಗತ್ತಿನಾದ್ಯಂತ ಇದುವರೆಗೆ ಒಟ್ಟು 58,51,494ಜನರಲ್ಲಿ ಕೋವಿಡ್-19 ಸೋಂಕು ಇರುವುದುದೃಢಪಟ್ಟಿದೆ ಎಂದು ಅಮೆರಿಕದ ಜಾನ್ಸ್ ಹಾಪ್‌ಕಿನ್ಸ್ ಕೊರೊನಾ ವೈರಸ್ ರಿಸೋರ್ಸ್ ಸೆಂಟರ್ ಮಾಹಿತಿ ನೀಡಿದೆ.
ಇದುವೆರೆಗೆ3,61,270 ಜನರು ಸಾವಿಗೀಡಾಗಿದ್ದು,24,45,181ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಉಳಿದಂತೆ 29 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಸಕ್ರಿಯವಾಗಿವೆ.
ಅಮೆರಿಕದಲ್ಲಿ ಒಂದರಲ್ಲೇ 17,25,656ಸೋಂಕಿತರಿದ್ದು, ಸಾವಿನ ಸಂಖ್ಯೆ 1,01,706ಕ್ಕೆ ತಲುಪಿದೆ.ಬ್ರೆಜಿಲ್‌ನಲ್ಲಿ 4,38,238 ಜನರಿಗೆ ಸೋಂಕು ತಗುಲಿದೆ. ಇದರಲ್ಲಿ26,754ಜನರು ಮೃತಪಟ್ಟಿದ್ದಾರೆ.
ಇಂಗ್ಲೆಂಡ್‌ನಲ್ಲಿ 37,919, ಇಟಲಿಯಲ್ಲಿ 33,142, ಪ್ರಾನ್ಸ್‌ನಲ್ಲಿ 28,665, ಸ್ಪೇನ್‌ನಲ್ಲಿ 27,119 ಸೋಂಕಿತರುಸಾವಿಗೀಡಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.