ಲಾಹೋರ್: ತೀವ್ರವಾಗಿ ಅನಾರೋಗ್ಯಪೀಡಿತರಾಗಿರುವ ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ (78) ಗುಣಮುಖರಾಗುವ ಸಾಧ್ಯತೆ ಕ್ಷೀಣಿಸಿದ್ದು, ಅವರನ್ನು ಯುಎಇ ಯಿಂದ ಏರ್ ಆಂಬುಲನ್ಸ್‌ನಲ್ಲಿದೇಶಕ್ಕೆ ತರುವ ಸಾಧ್ಯತೆ ಇದೆ.
ಪಾಕ್ ಸೇನೆಯು ಮಾಜಿ ಅಧ್ಯಕ್ಷರ ಕುಟುಂಬ ಸಂಪರ್ಕಿಸಿ, ಚಿಕಿತ್ಸೆಗೆ ನೆರವು ನೀಡುವುದರ ಜತೆಗೆ, ಅವರು ಬಯಸಿದಲ್ಲಿ ಮುಷರಫ್ ಅವರನ್ನು ಕರೆ ತರಲು ವ್ಯವಸ್ಥೆ ಮಾಡಲಾಗುವುದು ಎಂದು ಮಾಧ್ಯಮ ವರದಿ ಮಾಡಿದೆ.
2018 ರಲ್ಲಿ ಮುಷರಫ್ ಅವರಿಗೆ ಅಮಿಲೋಯ್ಡೋಸಿಸ್ ಇರುವುದು ಪತ್ತೆಯಾಗಿತ್ತು. ಸದ್ಯ ಅವರಿಗೆ ಬಹು ಅಂಗಾಂಗ ವೈಫಲ್ಯವಾಗಿದೆ. 2016ರಲ್ಲಿ ಚಿಕಿತ್ಸೆಗಾಗಿ ದುಬೈಗೆ ತೆರಳಿದ ಮುಷರಫ್, ಈವರೆಗೂ ಸ್ವದೇಶಕ್ಕೆ ವಾಪಸಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.