ADVERTISEMENT

ದಕ್ಷಿಣ ಆಫ್ರಿಕಾ: ಅಧ್ಯಕ್ಷರಾಗಿ ಸಿರಿಲ್‌ ರಾಮಫೋಸಾ ಮರು ಆಯ್ಕೆ

ಪಿಟಿಐ
Published 15 ಜೂನ್ 2024, 15:53 IST
Last Updated 15 ಜೂನ್ 2024, 15:53 IST
ಸಿರಿಲ್ ರಾಮಫೋಸಾ
ಸಿರಿಲ್ ರಾಮಫೋಸಾ   

ಜೊಹಾನಸ್‌ಬರ್ಗ್‌: ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿ ಸಿರಿಲ್‌ ರಾಮಫೋಸಾ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ.

ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್‌ (ಎಎನ್‌ಸಿ) ಮತ್ತು ‘ಡೆಮಾಕ್ರಟಿಕ್ ಅಲಯನ್ಸ್‌‘(ಡಿಎ) ಪಕ್ಷ  ತಮ್ಮ ನಡುವಿನ ಪೈಪೋಟಿಯನ್ನು ಬದಿಗೊತ್ತಿ ಸಮ್ಮಿಶ್ರ ಸರ್ಕಾರ ರಚಿಸುವ ಐತಿಹಾಸಿಕ ಒಪ್ಪಂದ ಮಾಡಿಕೊಂಡ ಬಳಿಕ, ಸಿರಿಲ್‌ ರಾಮಫೋಸಾ ಎರಡನೇ ಬಾರಿ ಮರು ಆಯ್ಕೆಯಾಗಿದ್ದಾರೆ.

ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ರಾಮಫೋಸಾ ಅವರ ಎಎನ್‌ಸಿ ಪಕ್ಷವು 30 ವರ್ಷಗಳಲ್ಲಿ ಮೊದಲ ಬಾರಿಗೆ ಸಂಸತ್ತಿನಲ್ಲಿ ತನ್ನ ಬಹುಮತವನ್ನು ಕಳೆದುಕೊಂಡಿತ್ತಾದರೂ, ಶೇ 40ರಷ್ಟು ಮತಗಳನ್ನು ಪಡೆದಿತ್ತು. ಡೆಮಾಕ್ರಟಿಕ್ ಅಲಯನ್ಸ್ (ಡಿ.ಎ)
ಶೇ 22ರಷ್ಟು ಮತಗಳನ್ನು ಪ‍ಡೆದು ಎರಡನೇ ಸ್ಥಾನ ಪಡೆಯಿತು.

ADVERTISEMENT

ರಾಷ್ಟ್ರೀಯ ಏಕತೆಯ ಹೊಸ ಸರ್ಕಾರವು ರಾಮಫೋಸಾ ನೇತೃತ್ವದ ಎಎನ್‌ಸಿ, ಡಿ.ಎ ಹಾಗೂ ಸಣ್ಣ ಪಕ್ಷಗಳನ್ನು ಒಳಗೊಂಡಿದೆ.

71 ವರ್ಷದ ರಾಮಫೋಸಾ ಅವರು ಶುಕ್ರವಾರ ನಡೆದ ಮತದಾನದಲ್ಲಿ ಆರ್ಥಿಕ ಸ್ವಾತಂತ್ರ್ಯ ಹೋರಾಟಗಾರರ (ಎಎಫ್‌ಎಫ್) ನಾಯಕ ಜೂಲಿಯಸ್ ಮಲೆಮಾ ವಿರುದ್ಧ ಜಯಗಳಿಸಿದರು. ರಾಮಫೋಸಾ 283 ಮತಗಳನ್ನು ಪಡೆದರೆ, ಮಲೆಮಾ 44 ಮತಗಳನ್ನು ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.