ಪ್ರಾಗ್ (ರಾಯಿಟರ್ಸ್): ಅಮೆರಿಕದ ನೆಲದಲ್ಲಿ ಸಿಖ್ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನೂ ಹತ್ಯೆಗೆ ನಡೆಸಿದ ವಿಫಲ ಸಂಚಿನಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಭಾರತೀಯ ವ್ಯಕ್ತಿ ನಿಖಿಲ್ ಗುಪ್ತಾ (52) ಅವರನ್ನು ಅಮೆರಿಕಕ್ಕೆ ಹಸ್ತಾಂತರ ಮಾಡಬಹುದು ಎಂದು ಜೆಕ್ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ ಎಂದು ನ್ಯಾಯ ಸಚಿವಾಲಯ ಶುಕ್ರವಾರ ಹೇಳಿದೆ.
‘ನಿಖಿಲ್ ಗುಪ್ತಾ ಅವರನ್ನು ಹಸ್ತಾಂತರಿಸಬಹುದು, ಆದರೆ, ನ್ಯಾಯ ಸಚಿವ ಪಾವೆಲ್ ಬ್ಲೇಜೆಕ್ ಅವರು ಈ ಸಂಬಂಧ ಅಂತಿಮ ತೀರ್ಮಾನ ತೆಗೆದುಕೊಳ್ಳುವಂತೆ ನ್ಯಾಯಾಲಯ ಆದೇಶ ನೀಡಿದೆ’ ಎಂದು ಸಚಿವಾಲಯದ ವಕ್ತಾರ ‘ರಾಯಿಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
‘ಸಚಿವರ ತೀರ್ಮಾನದ ಕಾಲ ಮಿತಿಯನ್ನು ಈ ಹಂತದಲ್ಲಿ ಊಹಿಸಲಾಗದು’ ಎಂದಿರುವ ಸಚಿವಾಲಯದ ವಕ್ತಾರರು, ‘ತನ್ನ ಹಸ್ತಾಂತರವನ್ನು ತಡೆಯುವುದಕ್ಕೆ ಸಂಬಂಧಿಸಿ ಗುಪ್ತಾ ಎಲ್ಲಾ ಪ್ರಯತ್ನಗಳನ್ನು ನಡೆಸುವ ಸಾಧ್ಯತೆ ಇದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.