ADVERTISEMENT

ಮಧ್ಯ ಅಮೆರಿಕ: ಭಾರಿ ಶೀತಗಾಳಿ

ಏಜೆನ್ಸೀಸ್
Published 16 ಜನವರಿ 2024, 15:16 IST
Last Updated 16 ಜನವರಿ 2024, 15:16 IST
<div class="paragraphs"><p>ಶೀತಗಾಳಿ</p></div>

ಶೀತಗಾಳಿ

   

ಬಫಲೊ: ಮಧ್ಯ ಅಮೆರಿಕದ ಬಹುತೇಕ ಭಾಗಗಳಲ್ಲಿ ಅಪಾಯಕಾರಿ ಮಟ್ಟದಲ್ಲಿ ಶೀತಗಾಳಿ ಬೀಸುತ್ತಿದ್ದು,  ಮೈ ಕೊರೆಯುವ ಚಳಿ ಉಂಟಾಗಿದೆ. ಅಲ್ಲಿ ಮಂಗಳವಾರದ ತಾಪಮಾನವು ಮೈನಸ್‌ 34.4 ಡಿಗ್ರಿಯಷ್ಟು ದಾಖಲಾಗಿದೆ.

ಈ ಭಾಗದಲ್ಲಿನ ಸುಮಾರು 1.10 ಲಕ್ಷ ಮನೆಗಳಿಗೆ, ವ್ಯಾಪಾರ, ವ್ಯವಹಾರ ಕೇಂದ್ರಗಳಿಗೆ ಸೋಮವಾರ ಸಂಜೆ ಬಳಿಕ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ರಸ್ತೆಯ ತುಂಬ ಭಾರಿ ಪ್ರಮಾಣದಲ್ಲಿ ಮಂಜುಗಡ್ಡೆ ಆವರಿಸಿದ್ದು, ನಾಗರಿಕರಿಗೆ ಸಂಚಾರ ಕೈಗೊಳ್ಳದಂತೆ ಸೂಚಿಸಲಾಗಿದೆ.

ADVERTISEMENT

ಪೋರ್ಟ್‌ಲ್ಯಾಂಡ್‌, ಷಿಕಾಗೊ ಸೇರಿದಂತೆ ಹಲವೆಡೆ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಶೀತಗಾಳಿಯಿಂದ ಪೋರ್ಟ್‌ಲ್ಯಾಂಡ್‌ ಪ್ರದೇಶದಲ್ಲಿ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ. 

ಶೀತಗಾಳಿಯ ಪರಿಣಾಮ ಅಮೆರಿಕದಲ್ಲಿ ಹಲವು ವಿಮಾನಗಳ ಪ್ರಯಾಣ ವಿಳಂಬವಾಗಿದ್ದರೆ, ಇನ್ನೂ ಹಲವು ವಿಮಾನಗಳ ಪ್ರಯಾಣ ರದ್ದಾಗಿವೆ. ಫ್ಲೈಟ್‌ ಟ್ರ್ಯಾಕಿಂಗ್‌ ಸೇವೆ ನೀಡುವ ‘ಫ್ಲೈಟ್‌ಅವೇರ್‌’ ಪ್ರಕಾರ, ಸೋಮವಾರ ಅಮೆರಿಕಕ್ಕೆ ಬರುವ ಮತ್ತು ಅಲ್ಲಿಂದ ಹೊರಡುವ ಸುಮಾರು 2,900 ವಿಮಾನಗಳ ಪ್ರಯಾಣ ರದ್ದಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.