ADVERTISEMENT

ಗಾಜಾದಲ್ಲಿ ಯುದ್ಧ ನಿಲ್ಲಿಸಿ: ವಿದೇಶಾಂಗ ಸಚಿವ ಜೈಶಂಕರ್‌

ಪಿಟಿಐ
Published 27 ಜುಲೈ 2024, 16:28 IST
Last Updated 27 ಜುಲೈ 2024, 16:28 IST
ಎಸ್‌.ಜೈಶಂಕರ್‌
ಎಸ್‌.ಜೈಶಂಕರ್‌   

ವಿಯನ್‌ಟಿಯಾನ್‌ (ಲಾವೋಸ್‌): ‘ಗಾಜಾದ ಮೇಲೆ ನಡೆಯುತ್ತಿರುವ ಯುದ್ಧವನ್ನು ಅಂತ್ಯಗೊಳಿಸಬೇಕು. ಪ್ಯಾಲೆಸ್ಟೀನ್‌ ಜನರಿಗೆ ಮಾನವೀಯ ನೆರವು ನೀಡುವುದನ್ನು ಭಾರತವು ಮುಂದುವರಿಸಲಿದೆ’ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಶನಿವಾರ ತಿಳಿಸಿದರು.

ಆಗ್ನೇಯ ಏಷ್ಯಾದ ರಾಷ್ಟ್ರಗಳ (ಎಎಸ್‌ಇಎಎನ್‌) ವಿದೇಶಾಂಗ ಸಚಿವರ 14ನೇ ಶೃಂಗಸಭೆಯು ಲಾವೋಸ್‌ನಲ್ಲಿ ನಡೆಯುತ್ತಿದೆ. ಈ ಸಭೆಯಲ್ಲಿ ಅವರು ಭಾಗವಹಿಸಿ, ಇಸ್ರೇಲ್‌–ಹಮಾಸ್‌ ಹಾಗೂ ರಷ್ಯಾ–ಉಕ್ರೇನ್‌ ಯುದ್ಧಗಳಿಗೆ ಸಂಬಂಧಿಸಿ ಭಾರತದ ನಿಲುವನ್ನು ಪ್ರಕಟಿಸಿದರು.

‘ಉಕ್ರೇನ್‌ ಮೇಲೆ ನಡೆಯುತ್ತಿರುವ ಯುದ್ಧವನ್ನು ಮಾತುಕತೆಯ ಮೂಲಕ ಕೊನೆಗಾಣಿಸಬೇಕು. ಕೆಂಪು ಸಮುದ್ರದಲ್ಲಿ ಸರಕು ಸಾಗಣೆ ಹಡಗಿನ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಪ್ಯಾಲೆಸ್ಟೀನ್‌ ನಿರಾಶ್ರಿತರಿಗಾಗಿ ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾರ್ಯ ಸಂಸ್ಥೆಗೆ (ಯುಎನ್‌ಆರ್‌ಡ್ಲ್ಯುಎ) ಭಾರತವು ಜುಲೈ 15ರಂದು 2.5 ಲಕ್ಷ ಡಾಲರ್‌ (ಸುಮಾರು ₹20.93 ಕೋಟಿ) ದೇಣಿಗೆ ನೀಡಿದೆ. ಇಸ್ರೇಲ್‌ ಹಾಗೂ ಪ್ಯಾಲೆಸ್ಟೀನ್‌ ಎಂಬ ‘ಎರಡು ದೇಶ ನೀತಿ’ಯನ್ನು ಭಾರತವು ಹಲವು ಬಾರಿ ಪ್ರತಿಪಾದಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.