ADVERTISEMENT

ಚೀನಾ ರಾಯಭಾರಿ ತಂಗಿದ್ದ ಪಾಕಿಸ್ತಾನದ ಹೋಟೆಲ್‌ನಲ್ಲಿ ಬಾಂಬ್‌ ಸ್ಫೋಟ: ನಾಲ್ವರ ಸಾವು

ಏಜೆನ್ಸೀಸ್
Published 22 ಏಪ್ರಿಲ್ 2021, 2:47 IST
Last Updated 22 ಏಪ್ರಿಲ್ 2021, 2:47 IST
ಬಾಂಬ್‌ ಸ್ಫೋಟ ಸಂಭವಿಸಿರುವ ಪ್ರದೇಶ –ರಾಯಿಟರ್ಸ್‌ ಚಿತ್ರ
ಬಾಂಬ್‌ ಸ್ಫೋಟ ಸಂಭವಿಸಿರುವ ಪ್ರದೇಶ –ರಾಯಿಟರ್ಸ್‌ ಚಿತ್ರ   

ಇಸ್ಲಾಮಾಬಾದ್‌: ನೈರುತ್ಯ ಪಾಕಿಸ್ತಾನದಲ್ಲಿ ಚೀನಾದ ರಾಯಭಾರಿಗೆ ಆತಿಥ್ಯ ವಹಿಸಿದ್ದ ಹೋಟೆಲ್‌ನಲ್ಲಿ ಬುಧವಾರ ತಡರಾತ್ರಿ ಬಾಂಬ್‌ ಸ್ಫೋಟ ಸಂಭವಿಸಿದೆ.

ಬಲೂಚಿಸ್ತಾನದ ಕ್ವೆಟ್ಟಾ ನಗರದ ಐಶಾರಾಮಿ ಸೆರೆನಾ ಹೋಟೆಲ್‌ನಲ್ಲಿ ದುರಂತ ನಡೆದಿದ್ದು, ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಯಭಾರಿ ನೇತೃತ್ವದ ನಾಲ್ಕು ಜನರ ಚೀನಾದ ನಿಯೋಗವು ಹೋಟೆಲ್‌ನಲ್ಲಿ ತಂಗಿತ್ತು. ‘ಸ್ಫೋಟ ಸಂಭವಿಸಿದ ಸಂದರ್ಭದಲ್ಲಿ ರಾಯಭಾರಿ ಅವರು ಸಭೆಗೆ ತೆರಳಿದ್ದರು’ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಅಜರ್ ಇಕ್ರಂ ತಿಳಿಸಿದ್ದಾರೆ.

ADVERTISEMENT

ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಇಕ್ರಂ ಹೇಳಿದ್ದಾರೆ. ದಾಳಿಯ ಹೊಣೆಯನ್ನು ಸದ್ಯಕ್ಕೆ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.