ADVERTISEMENT

ಇಂಡೋನೇಷ್ಯಾದಲ್ಲಿ ಭಾರಿ ಪ್ರವಾಹ: ಮೃತರ ಸಂಖ್ಯೆ 50ಕ್ಕೆ ಏರಿಕೆ, 27 ಮಂದಿ ನಾಪತ್ತೆ

ರಾಯಿಟರ್ಸ್
Published 14 ಮೇ 2024, 6:42 IST
Last Updated 14 ಮೇ 2024, 6:42 IST
<div class="paragraphs"><p>ಪ್ರವಾಹಕ್ಕೆ ನಲುಗಿದ ಇಂಡೋನೇಷ್ಯಾ</p></div>

ಪ್ರವಾಹಕ್ಕೆ ನಲುಗಿದ ಇಂಡೋನೇಷ್ಯಾ

   

ರಾಯಿಟರ್ಸ್‌

ತನಾಹ್ ದಾತಾರ್(ಇಂಡೋನೇಷ್ಯಾ): ಪಶ್ಚಿಮ ಇಂಡೋನೇಷ್ಯಾದಲ್ಲಿ ಸಂಭವಿಸಿದ ಜ್ವಾಲಾಮುಖಿ ಸ್ಪೋಟದಿಂದ ಉಂಟಾದ ಹಠಾತ್ ಪ್ರವಾಹ ಮತ್ತು ಶೀತ ಲಾವಾ ಹರಿವಿನಿಂದ ಮೃತಪಟ್ಟವರ ಸಂಖ್ಯೆ 50ಕ್ಕೆ ಏರಿದೆ. 27 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ವಿಪತ್ತು ನಿರ್ವಹಣಾ ಸಂಸ್ಥೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಶನಿವಾರ ಸಂಜೆ ಸುಮಾತ್ರಾ ದ್ವೀಪದಲ್ಲಿ ಜ್ವಾಲಾಮುಖಿ ಸ್ಪೋಟಗೊಂಡಿದೆ. ಬಳಿಕ ಸಂಭವಿಸಿದ ಪ್ರವಾಹದಿಂದ ರಸ್ತೆಗಳು, ಮನೆಗಳು ಜಲಾವೃತಗೊಂಡಿವೆ.

ಭಾನುವಾರ 37 ಮಂದಿ ಸಾವಿಗೀಡಾಗಿದ್ದರು. ಇಂದು ಅವಶೇಷಗಳ ಅಡಿಯಿಂದ 50 ಶವಗಳನ್ನು ಹೊರತೆಗೆಯಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದೆ ಎಂದು ಪಶ್ಚಿಮ ಸುಮಾತ್ರಾ ವಿಪತ್ತು ನಿರ್ವಹಣಾ ಸಂಸ್ಥೆ ಅಧಿಕಾರಿ ಇಲ್ಹಾಮ್ ವಹಾಬ್ ತಿಳಿಸಿದ್ದಾರೆ.

ಭಾರಿ ಪ್ರವಾಹ ಹಿನ್ನೆಲೆ 3 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಪಶ್ಚಿಮ ಸುಮಾತ್ರಾ ಗವರ್ನರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.