ADVERTISEMENT

ವಿಯೆಟ್ನಾಂ ಪ್ರವಾಹ: ಮೃತರ ಸಂಖ್ಯೆ 87ಕ್ಕೆ ಏರಿಕೆ

ಎಪಿ
Published 10 ಸೆಪ್ಟೆಂಬರ್ 2024, 14:11 IST
Last Updated 10 ಸೆಪ್ಟೆಂಬರ್ 2024, 14:11 IST
<div class="paragraphs"><p>ವಿಯೆಟ್ನಾಂನ ಯೆನ್‌ ಬಾಯ್‌ ಎಂಬ ಪ್ರದೇಶದ ಜನವಸತಿ ಪ್ರದೇಶವು ಜಲಾವೃತವಾಗಿದೆ</p></div>

ವಿಯೆಟ್ನಾಂನ ಯೆನ್‌ ಬಾಯ್‌ ಎಂಬ ಪ್ರದೇಶದ ಜನವಸತಿ ಪ್ರದೇಶವು ಜಲಾವೃತವಾಗಿದೆ

   

ಹನೋಯಿ (ವಿಯೆಟ್ನಾಂ): ‘ಯಾಗಿ’ ಚಂಡಮಾರುತದಿಂದ ವಿಯೆಟ್ನಾಂ ದೇಶದ ಹಲವೆಡೆ ಭಾರಿ ಮಳೆಯಾಗುತ್ತಿದೆ. ಭೂಕುಸಿತ ಹಾಗೂ ಪ್ರವಾಹದಲ್ಲಿ ಸಿಲುಕಿ ಇದುವರೆಗೆ ಮೃತಪಟ್ಟವರ ಸಂಖ್ಯೆ 87ಕ್ಕೆ ಏರಿದೆ. 70 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸರ್ಕಾರದ ಪ್ರಕಟಣೆ ಮಂಗಳವಾರ ತಿಳಿಸಿದೆ.  

ಭಾನುವಾರದಿಂದಲೂ ಭಾರಿ ಮಳೆಯಾಗುತ್ತಿದ್ದು, ಅನೇಕ ಕಡೆಗಳಲ್ಲಿ ಭೂಕುಸಿತ ಉಂಟಾಗಿದೆ. ವಿಯೆಟ್ನಾಂ ಸರ್ಕಾರದ ಅಧಿಕೃತ ವಾಹಿನಿ ‘ವಿಟಿವಿ’ ಕೂಡ ಮಳೆಯ ಪರಿಣಾಮದಿಂದ ಉಂಟಾದ ಅವಘಡಗಳಲ್ಲಿ 87 ಮಂದಿ ಮೃತಪಟ್ಟಿದ್ದಾರೆ ಎಂದು ವರದಿ ಮಾಡಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.