ADVERTISEMENT

ಚೀನಾ ಆಕ್ರಮಣಕಾರಿ ನೀತಿ; 1 ಟ್ರಿಲಿಯನ್ ಡಾಲರ್‌ನತ್ತ ಅಮೆರಿಕ ರಕ್ಷಣಾ ಬಜೆಟ್

ಏಜೆನ್ಸೀಸ್
Published 14 ಮಾರ್ಚ್ 2023, 5:33 IST
Last Updated 14 ಮಾರ್ಚ್ 2023, 5:33 IST
   

ವಾಷಿಂಗ್ಟನ್: ’ಚೀನಾದ ಆಕ್ರಮಣಕಾರಿ ನಡೆಯನ್ನು ಗಮನದಲ್ಲಿಟ್ಟುಕೊಂಡು ಪೆಂಟಗನ್ ತನ್ನ ರಕ್ಷಣ ಸಾಮರ್ಥ್ಯ ಹೆಚ್ಚಿಸಲು ಮುಂದಾಗಿದೆ. ಇದರಿಂದ ಅಮೆರಿಕದ ವಾರ್ಷಿಕ ಬಜೆಟ್ ಮೊತ್ತ 1 ಟ್ರಿಲಿಯನ್ ಡಾಲರ್‌ನತ್ತ (82.38 ಲಕ್ಷ ಕೋಟಿ) ತಲುಪಲಿದೆ. ಇದರಲ್ಲಿ ಬಾಹ್ಯಾಕಾಶ ರಕ್ಷಣೆ, ಅತ್ಯಾಧುನಿಕ ಕ್ಷಿಪಣಿ, ಜೆಟ್‌ಗಳು ಇತ್ಯಾದಿಗಳಿಗೆ ಪ್ರಮುಖವಾಗಿ ಹಣಕಾಸು ವಿನಿಯೋಗಿಸಲು ರಕ್ಷಣಾ ಇಲಾಖೆ ವಿನಂತಿಸಿದೆ’ ಎಂದು ಅಮೆರಿಕ ಹಣಕಾಸು ಸಚಿವಾಲಯ ಹೇಳಿದೆ.

ಈ ಕುರಿತಂತೆ ಅಮೆರಿಕ ಆಡಳಿತವು 842 ಬಿಲಿಯನ್ ಮೊತ್ತ ಬಜೆಟ್‌ನಲ್ಲಿ ಹೆಚ್ಚಿಸಲು ಸಂಸತ್ತಿಗೆ ಕೇಳಿಕೊಂಡಿದೆ. ಇದು ಅಫ್ಗಾನಿಸ್ತಾನ ಹಾಗೂ 2000ರಲ್ಲಿ ಇರಾಕ್ ಜತೆಗಿನ ಯುದ್ಧ ಮಿತಿಮೀರಿದ ಸಂದರ್ಭದ ನಂತರ ಪೆಂಟಗನ್ ಕೇಳಿಕೊಂಡಿರುವ ಅತಿ ದೊಡ್ಡ ಮೊತ್ತದ ಬಜೆಟ್ ಆಗಿರಲಿದೆ.

ರಷ್ಯಾವನ್ನು ಪ್ರಬಲವಾಗಿ ಎದುರಿಸಲು ಉಕ್ರೇನ್‌ಗೆ ಶಸ್ತ್ರಾಸ್ತ್ರ ಪೂರೈಸಲು ಹಾಗೂ ಚೀನಾ ತನ್ನ ಪರಮಾಣು ಸಾಮರ್ಥ್ಯ ವಿಸ್ತರಿಸುತ್ತಿರುವ ಹಿನ್ನೆಲೆ ಈ ಬೆಳವಣಿಗೆ ನಡೆದಿದೆ.

ADVERTISEMENT

ಈಚೆಗೆ ಚೀನಾ ತನ್ನ ರಕ್ಷಣಾ ಬಜೆಟ್‌ನ ಮೊತ್ತ 1.55 ಟ್ರಿಲಿಯನ್ ಯುವಾನ್‌ (224 ಶತಕೋಟಿ ಡಾಲರ್‌ - ₹18.30 ಲಕ್ಷ ಕೋಟಿ)ಗೆ ಏರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.