ADVERTISEMENT

ಬೈಡನ್ ನಿರ್ಗಮನ ಬೆನ್ನಲ್ಲೇ ಡೆಮಾಕ್ರಟಿಕ್ ಪಕ್ಷಕ್ಕೆ ಆನ್‌ಲೈನ್ ದೇಣಿಗೆಯ ಹೊಳೆ

ಪಿಟಿಐ
Published 22 ಜುಲೈ 2024, 4:55 IST
Last Updated 22 ಜುಲೈ 2024, 4:55 IST
<div class="paragraphs"><p>ಬೈಡನ್ ನಿರ್ಗಮನದ ಬಳಿಕ ಜನತ ಬೆಂಬಲ</p></div>

ಬೈಡನ್ ನಿರ್ಗಮನದ ಬಳಿಕ ಜನತ ಬೆಂಬಲ

   

–ರಾಯಿಟರ್ಸ್ ಚಿತ್ರ

ವಾಷಿಂಗ್ಟನ್‌: ಜೋ ಬೈಡನ್ ಅವರು ಅಧ್ಯಕ್ಷೀಯ ಕಣದಿಂದ ಹಿಂದೆ ಸರಿದ ಬೆನ್ನಲ್ಲೇ, ಡೆಮಾಕ್ರಟಿಕ್ ಪಕ್ಷಕ್ಕೆ ದೇಣಿಗೆಯ ಹೊಳೆಯೇ ಹರಿದು ಬಂದಿದೆ. ಭಾನುವಾರ ಒಂದೇ ದಿನ $50 ಮಿಲಿಯನ್ (₹418.30 ಕೋಟಿ) ದೇಣಿಗೆ ಲಭಿಸಿದೆ. ಇದು 2020ರ ಚುನಾವಣೆ ಬಳಿಕ ಒಂದೇ ದಿನ ಸಿಕ್ಕಿದ ಅತಿ ದೊಡ್ಡ ಪ್ರಮಾಣದ ದೇಣಿಗೆ ಮೊತ್ತವಾಗಿದೆ.

ADVERTISEMENT

ಡೆಮಾಕ್ರಟಿಕ್ ಪಕ್ಷದ ಆನ್‌ಲೈನ್‌ ದೇಣಿಗೆಯನ್ನು ಪರಿಶೀಲಿಸುವ ActBlueನ ದತ್ತಾಂಶದ ಮಾಹಿತಿಯನ್ನು ಆಧರಿಸಿ ನ್ಯೂಯಾರ್ಕ್ ಟೈಮ್ಸ್ ಈ ವರದಿ ಮಾಡಿದೆ.

ಬೈಡನ್ ಹಿಂದೆ ಸರಿದು, ಕಮಲಾ ಹ್ಯಾರಿಸ್‌ ಮುಂದಿನ ಅಭ್ಯರ್ಥಿ ಎಂದು ಘೋಷಣೆಯಾದ ಬೆನ್ನಲ್ಲೇ, ಆನ್‌ಲೈನ್‌ ದೇಣಿಗೆ ಪ್ರಮಾಣ ಏರಿಕೆಯಾಗಿದೆ.

ಬೈಡನ್ ಅವರು ಹಿಂದೆ ಸರಿಯುವುದಕ್ಕೂ ಮುನ್ನ ಗಂಟೆಗೆ ಸರಾಸರಿ $ 200,000 (₹16.73 ಕೋಟಿ) ದೇಣಿಗೆ ಸಂಗ್ರಹವಾಗುತ್ತಿದ್ದರೆ, ಅವರು ಹಿಂದೆ ಸರಿದ ಬಳಿಕ ಅದು $11.5 ಮಿಲಿಯನ್‌ಗೆ (₹ 96.20ಕೋಟಿ) ಏರಿಕೆಯಾಗಿದೆ.

‘ಪಕ್ಷದ ಇತಿಹಾಸದಲ್ಲಿ ಇದು ಅತ್ಯಂತ ದೊಡ್ಡ ನಿಧಿ ಸಂಗ್ರಹದ ಕ್ಷಣವಾಗಿರಬಹುದು’ ಎಂದು ಡೆಮಾಕ್ರಟಿಕ್ ಪಕ್ಷದ ಡಿಜಿಟಲ್ ಸ್ಟಾಟರ್ಜಿಸ್ಟ್ ಕೆನೆತ್ ಪೆನ್ನಿಂಗ್ಟನ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಹಿಂದೆ 2020ರ ಸೆಪ್ಟಂಬರ್‌ನಲ್ಲಿ ಒಂದೇ ದಿನ $73.5 ಮಿಲಿಯನ್‌ (₹614.86 ಕೋಟಿ) ಸಂಗ್ರಹಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.