ವಾಷಿಂಗ್ಟನ್: ಜೋ ಬೈಡನ್ ಅಧಿಕಾರ ಸ್ವೀಕಾರದ ಬಳಿಕ ಮೂವರು ಹೊಸ ಸೆನೆಟರ್‌ಗಳ ಪ್ರಮಾಣವಚನದ ಜೊತೆಗೆ ಅಮೆರಿಕದ ಸೆನೆಟ್‌ನಲ್ಲಿ ಡೆಮಾಕ್ರಟಿಕ್ ಪಕ್ಷ ಬಹುಮತ ಸಾಧಿಸಿದೆ. ಹೀಗಾಗಿ, ಏಕೀಕೃತ ಸರ್ಕಾರದಾದ್ಯಂತ ಅಭೂತಪೂರ್ವ ರಾಷ್ಟ್ರೀಯ ಸವಾಲುಗಳ ಸಮಯದಲ್ಲಿ ಹೊಸ ಅಧ್ಯಕ್ಷರ ಕಾರ್ಯಸೂಚಿಯನ್ನು ಜಾರಿಗೊಳಿಸಲು ಇದು ಅನುಕೂಲವಾಗಲಿದೆ.
ಅಮೆರಿಕದ ನೂತನ ಉಪಾಧ್ಯಕ್ಷೆಯಾಗಿ ಪ್ರಮಾಣವಚನ ಸ್ವೀಕರಿಸಿದ ಗಂಟೆಗಳ ಬಳಿಕ ಕಮಲಾ ಹ್ಯಾರಿಸ್, ಪ್ರಮಾಣವಚನಕ್ಕೆ ಆಗಮಿಸಿದ ಹೊಸ ಡೆಮಾಕ್ರಟಿಕ್ ಸೆನೆಟರ್‌ಗಳಾದ ಜಾನ್ ಒಸಾಫ್, ರಾಫೆಲ್ ವಾರ್ನಾಕ್ ಮತ್ತು ಅಲೆಕ್ಸ್ ಪಡಿಲ್ಲಾ ಅವರಿಗೆ ಸ್ವಾಗತ ಕೋರಿದರು.
ಈ ಮೂವರು ಡೆಮಾಕ್ರಟಿಕ್ ಸದಸ್ಯರು ಸೆನೆಟ್‌ಗೆ ಸೇರಿದ ಬಳಿಕ ಎರಡೂ ಪಕ್ಷಗಳ ಸದಸ್ಯ ಬಲ 50-50 ಆಗಿದ್ದು, ತಮ್ಮ ಮತವನ್ನು ನೀಡಿ ಡೆಮಾಕ್ರಟಿಕ್ ಬಹುಮತವನ್ನು ಎತ್ತಿಹಿಡಿಯುವ ಟೈ ಬ್ರೇಕಿಂಗ್ ಮತದ ಅಧಿಕಾರ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗಿದೆ.
“ಇಂದು, ಅಮೆರಿಕದಲ್ಲಿ ಹೊಸ ಅಲೆ ಆರಂಭವಾಗಿದೆ. ನಾವು ಕಳೆದ ನಾಲ್ಕು ವರ್ಷಗಳ ಪುಟವನ್ನು ತಿರುಗಿಸುತ್ತಿದ್ದೇವೆ, ನಾವು ದೇಶವನ್ನು ಮತ್ತೆ ಒಂದುಗೂಡಿಸಲಿದ್ದೇವೆ, ಕೋವಿಡ್ 19 ಅನ್ನು ಸೋಲಿಸುತ್ತೇವೆ, ಜನರಿಗೆ ಆರ್ಥಿಕ ಪರಿಹಾರವನ್ನು ನೀಡುತ್ತೇವೆ ”ಎಂದು ಒಸಾಫ್ ಪ್ರಮಾಣವಚನದ ಬಳಿಕ ಕ್ಯಾಪಿಟಲ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
“ಇದನ್ನೇ ಮಾಡಬೇಕೆಂದು ಜನರು ನಮ್ಮನ್ನು ಇಲ್ಲಿಗೆ ಕಳುಹಿಸಿದ್ದಾರೆ.” ಎಂದು ಅವರು ಹೇಳಿದ್ದಾರೆ.
ಹೊಸ ಸೆನೆಟರ್ ಒಸಾಫ್, ಕಾಂಗ್ರೆಸ್ಸಿನ ಮಾಜಿ ಸಹಾಯಕ ಮತ್ತು ತನಿಖಾ ಪತ್ರಕರ್ತರಾಗಿದ್ದಾರೆ. ಇನ್ನೂ, ಅಟ್ಲಾಂಟದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಚರ್ಚ್‌ನ ಪಾದ್ರಿಯಾಗಿದ್ದ ವಾರ್ನಾಕ್, ಜಾರ್ಜಿಯಾದಲ್ಲಿ ಇಬ್ಬರು ರಿಪಬ್ಲಿಕನ್ನರನ್ನು ಸೋಲಿಸಿ ಜಯಶಾಲಿಯಾಗಿದ್ದರು.
ಪಡಿಲ್ಲಾ ಅವರನ್ನು ಹ್ಯಾರಿಸ್ ಅವರ ಉಳಿದ ಅವಧಿಯನ್ನು ಮುಗಿಸಲು ಕ್ಯಾಲಿಫೋರ್ನಿಯಾದ ಗವರ್ನರ್ ನೇಮಕ ಮಾಡಿದ್ದರು.
ಒಟ್ಟಿಗೆ ಹೇಳುವುದಾದರೆ, ಮೂವರು ಹೊಸ ಸೆನೆಟರ್‌ಗಳ ಆಗಮನವು ದಶಕದಲ್ಲಿ ಇದೇ ಮೊದಲ ಬಾರಿಗೆ ಡೆಮಾಕ್ರಟ್‌ಗಳಿಗೆ ಸೆನೆಟ್, ಸಂಸತ್ ಸಭೆ ಮತ್ತು ಶ್ವೇತಭವನದ ನಿಯಂತ್ರಣ ಸಿಕ್ಕಿದೆ. ಬೈಡನ್ ಕೋವಿಡ್ ಬಿಕ್ಕಟ್ಟಿನ ಅಭೂತಪೂರ್ವ ಸವಾಲುಗಳು ಮತ್ತು ಅದರ ಆರ್ಥಿಕ ಕುಸಿತವನ್ನು ಎದುರಿಸುತ್ತಿದ್ದಾರೆ. ಡೊನಾಲ್ಡ್ ಟ್ರಂಪ್ ಬೆಂಬಲಿಗರ ದಾಂಧಲೆಯಿಂದ ರಾಷ್ಟ್ರ ನೋವಿನ ರಾಜಕೀಯ ವಿಭಜನೆಯನ್ನು ಕಣ್ಣಾರೆ ಕಂಡಿದ್ದು, ಇವೆಲ್ಲವನ್ನು ನಿಭಾಯಿಸುವ ಹೊಣೆ ಬೈಡನ್ ಮೇಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.