ವಾಷಿಂಗ್ಟನ್: ಅಮೆರಿಕದ ಸೆನೆಟ್‌ಗೆ ಡೆಮಾಕ್ರಟಿಕ್ ಪಕ್ಷದ ಇಬ್ಬರು ಅಭ್ಯರ್ಥಿಗಳು ಆಯ್ಕಯಾಗಿದ್ದು, ಈ ಮೂಲಕ ಪಕ್ಷವು ಬಹುಮತ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಗೆಲುವು ಅಧ್ಯಕ್ಷ ಜೋ ಬೈಡನ್ ಅವರಿಗೆ ಅಧಿಕಾರದ ಎರಡನೇ ಅವಧಿಯಲ್ಲಿ ಹೆಚ್ಚಿನ ಬಲವನ್ನು ನೀಡಿದೆ.
ಆಡಳಿತ ಕಾರ್ಯಸೂಚಿ ಮತ್ತು ನ್ಯಾಯಮೂರ್ತಿಗಳ ನೇಮಕ ಮತ್ತು ಆಯಕಟ್ಟಿನ ಸ್ಥಾನಗಳಿಗೆ ನೇಮಕ ಮಾಡುವಲ್ಲಿ ಜೋ ಬೈಡನ್ ಅವರ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ ಎಂದೇ ಇಬ್ಬರು ಸದಸ್ಯರ ಗೆಲುವನ್ನು ವಿಶ್ಲೇಷಿಸಲಾಗಿದೆ.
ಕಾರ್ಟೆಜ್ ಮಾಸ್ಟೊ ಅವರು ನೆವಡಾದಿಂದ ಪ್ರತಿಸ್ಪರ್ಧಿ ರಿಪಬ್ಲಿಕನ್ ಪಕ್ಷದ ಅಡಂ ಲಕ್ಸಲ್ಟ್ ವಿರುದ್ಧ ಜಯಗಳಿಸಿದರೆ, ಮಾರ್ಕ್ ಕೆಲಿ ಅವರು ಅರಿಜೋನಾದಲ್ಲಿ ರಿಪಬ್ಲಿಕನ್ ಪಾರ್ಟಿಯ ಬ್ಲೇಕ್ ಮಾಸ್ಟರ್ ವಿರುದ್ದ ಜಯಗಳಿಸಿದರು.
ಈ ಫಲಿತಾಂಶದೊಂದಿಗೆ 100 ಸದಸ್ಯ ಬಲದ ಅಮೆರಿಕದ ಸೆನೆಟ್‌ನಲ್ಲಿ ಡೆಮಾಕ್ರಟಿಕ್ ಪಕ್ಷದ ಬಲ 50ಕ್ಕೆ ಏರಿದೆ. ರಿಪಬ್ಲಿಕನ್ ಪಾರ್ಟಿ ಬಲ 49 ಆಗಿದ್ದು, ಜಾರ್ಜಿಯಾದ ಫಲಿತಾಂಶ ಬರಬೇಕಿದೆ. ಉಭಯ ಪಕ್ಷಗಳ ಬಲ ಸಮ ಆದಲ್ಲಿ ಡೆಮಾಕ್ರಟಿಕ್ ಪಕ್ಷದವರೇ ಆದ ಉಪಾಧ್ಯಕ್ಷೆ ಕಮಲಾಹ್ಯಾರಿಸ್ ತಮ್ಮ ವಿವೇಚನಾ ಮತ ಚಲಾಯಿಸುವರು.
’ಈ ಫಲಿತಾಂಶವು ಡೆಮಾಕ್ರಟಿಕ್ ಪಕ್ಷದ ಕಾರ್ಯಸೂಚಿಗೆ ದೊರೆತ ಗೆಲುವು. ಅಮೆರಿಕದ ಜನರ ಗೆಲುವು’ ಎಂದು ಸೆನೆಟ್‌ನಲ್ಲಿನ ಪಕ್ಷದ ನಾಯಕ ಚುಕ್ ಚುಮೆರ್ ಅವರು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.