ADVERTISEMENT

ವಿದ್ಯಾರ್ಥಿ ಅಕುಲ್‌ ಧವನ್‌ ಸಾವಿಗೆ ಅತಿಯಾದ ಮದ್ಯಸೇವನೆಯೇ ಕಾರಣ: ಅಮೆರಿಕ ಪೊಲೀಸರು

ಏಜೆನ್ಸೀಸ್
Published 23 ಫೆಬ್ರುವರಿ 2024, 2:27 IST
Last Updated 23 ಫೆಬ್ರುವರಿ 2024, 2:27 IST
<div class="paragraphs"><p>ಸಾವು–ಪ್ರಾತಿನಿಧಿಕ ಚಿತ್ರ</p></div>

ಸಾವು–ಪ್ರಾತಿನಿಧಿಕ ಚಿತ್ರ

   

ನ್ಯೂಯಾರ್ಕ್‌: ಅಮೆರಿಕದ ಇಲಿನಾಯ್ಸ್ ಅರ್ಬಾನಾ– ಚಾಂಪೇನ್ ವಿಶ್ವವಿದ್ಯಾಲಯದಲ್ಲಿ (ಯುಐಯುಸಿ) ವ್ಯಾಸಂಗ ಮಾಡುತ್ತಿದ್ದ ಭಾರತೀಯ– ಅಮೆರಿಕನ್‌ ವಿದ್ಯಾರ್ಥಿ ಅಕುಲ್‌ ಬಿ. ಧವನ್‌ ಸಾವಿಗೆ ಅತಿಯಾದ ಮದ್ಯಸೇವನೆಯೇ ಕಾರಣ ಎಂದು ಪೊಲೀಸರು ಹೇಳಿದ್ದಾರೆ. 

ಅಕುಲ್‌ ಬಿ. ಧವನ್‌ ಜನವರಿ 26ರಂದು ಶನಿವಾರ ನಾಪತ್ತೆಯಾಗಿದ್ದ. ಅದಾದ 10 ಗಂಟೆಗಳ ಬಳಿಕ ವಿಶ್ವವಿದ್ಯಾಲಯದ ಬಳಿಯ ಕಟ್ಟಡದ ಹಿಂಬದಿಯಲ್ಲಿ ಆತನ ಮೃತದೇಹ ಪತ್ತೆಯಾಗಿತ್ತು.

ADVERTISEMENT

ವಿದ್ಯಾರ್ಥಿಯ ಸಾವಿನ ನಿಖರ ಕಾರಣದ ಪತ್ತೆಗಾಗಿ ತನಿಖೆ ನಡೆಸಿರುವ ಪೊಲೀಸರು, ಅತಿಯಾಗಿ ಮದ್ಯಸೇವನೆ ಹಾಗೂ ದೇಹದಲ್ಲಿ ಸಾಮಾನ್ಯ ಉಷ್ಣತೆ ಪ್ರಮಾಣಕ್ಕಿಂತ ಕಡಿಮೆ ಉಷ್ಣತೆ ಇದ್ದಿದ್ದರಿಂದ ವಿದ್ಯಾರ್ಥಿ ಧವನ್‌ ಮೃತಪಟ್ಟಿದ್ದಾರೆ ಎಂದು ಇಲಿನಾಯ್ಸ್‌ ರಾಜ್ಯದ ಪೊಲೀಸರು ಮತ್ತು ಚಾಂಪೇನ್‌ ಕೌಂಟಿ ಕಾರ್ನರ್‌ನ ಕಚೇರಿ ಮಾಹಿತಿ ನೀಡಿದೆ.

ವಿದ್ಯಾರ್ಥಿಯ ಸಾವಿಗೆ ಸಂಬಂಧಿಸಿದಂತೆ ಯಾವುದೇ ಸಂಚು ನಡೆದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.