ADVERTISEMENT

ಸಲಿಂಗ ವಿವಾಹ ನಿರಾಕರಣೆ ಅಸಂವಿಧಾನಿಕ: ಜಪಾನ್‌ ಹೈಕೋರ್ಟ್‌ ತೀರ್ಪು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2024, 12:43 IST
Last Updated 14 ಮಾರ್ಚ್ 2024, 12:43 IST
....
....   

ಟೋಕಿಯೊ: ಸಲಿಂಗ ವಿವಾಹ ನಿರಾಕರಿಸುವುದು ಅಸಂವಿಧಾನಿಕ ಎಂದು ಜಪಾನ್‌ ಹೈಕೋರ್ಟ್‌ ಗುರುವಾರ ಅಭಿಪ್ರಾಯಪಟ್ಟಿದೆ.

ಸಲಿಂಗ ವಿವಾಹಕ್ಕೆ ಅವಕಾಶ ನೀಡಲು ಇರುವ ಕಾನೂನು ತೊಡಕುಗಳನ್ನು ನಿವಾರಿಸಲು ಸರ್ಕಾರ ತುರ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಅದು ಹೇಳಿದೆ.

ಪ್ರಸ್ತುತ ವಿವಾಹ ಕಾನೂನನ್ನು ರದ್ದುಗೊಳಿಸುವ ಅಧಿಕಾರ ನ್ಯಾಯಾಲಯಕ್ಕೆ ಇಲ್ಲ. ಕಾನೂನನ್ನು ಪರಿಷ್ಕರಿಸದ ಹೊರತು ಎಲ್‌ಜಿಬಿಟಿಕ್ಯು + ದಂಪತಿಗಳು ಅಥವಾ ಇತರ ರೀತಿಯ ವಿವಾಹಗಳಿಗೆ ಅನುಮತಿಸುವ ಹೊಸ ಕಾನೂನನ್ನು ಜಾರಿಗೊಳಿಸದ ಹೊರತು ಸರ್ಕಾರಿ ಕಚೇರಿಗಳು ಸಲಿಂಗ ದಂಪತಿಗಳಿಗೆ ವಿವಾಹ ಮಾನ್ಯತೆ ನಿರಾಕರಿಸುವುದನ್ನು ಮುಂದುವರಿಸಬಹುದಾಗಿದೆ ಎಂದು ಹೇಳಿದೆ. 

ADVERTISEMENT

ಸಲಿಂಗಿ ಜೋಡಿಗಳಿಗೆ ಮದುವೆಯಾಗಲು ಮತ್ತು ಸಾಮಾನ್ಯ ದಂಪತಿಗಳಿಗಿರುವ ಪ್ರಯೋಜನಗಳನ್ನು ಪಡೆಯಲು ಅನುಮತಿ ನಿರಾಕರಿಸುವುದು, ಕುಟುಂಬವನ್ನು ಹೊಂದುವ ಸಲಿಂಗಿ ದಂಪತಿಗಳ ಮೂಲಭೂತ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಸಪ್ಪೋರೊ ಹೈಕೋರ್ಟ್ ನೀಡಿರುವ ತೀರ್ಪಿನಲ್ಲಿ ಹೇಳಿದೆ.  

ಹೈಕೋರ್ಟ್‌ ಗುರುವಾರ ನೀಡಿದ ಈ ತೀರ್ಪಿಗೂ ಮೊದಲು ಕೆಳ ನ್ಯಾಯಾಲಯವು ಹಿಂದೆ ಇದೇ ರೀತಿಯ ತೀರ್ಪು ನೀಡಿದೆ. ಈ ರೀತಿಯ ತೀರ್ಪು ನೀಡಿದ ಆರನೇ ಜಿಲ್ಲಾ ನ್ಯಾಯಾಲಯ ಇದಾಗಿದೆ. ಆದರೆ, ಟೋಕಿಯೊ ಜಿಲ್ಲಾ ನ್ಯಾಯಾಲಯದ ತೀರ್ಪು, ಜಪಾನ್‌ನ ಎಲ್‌ಜಿಬಿಟಿಕ್ಯು+ ಸಮುದಾಯವು ಸಮಾನ ವಿವಾಹ ಹಕ್ಕುಗಳಿಗೆ ನಡೆಸುತ್ತಿರುವ ಹೋರಾಟಕ್ಕೆ ಸಿಕ್ಕಿರುವ ಭಾಗಶಃ ವಿಜಯವೆನಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.