ADVERTISEMENT

ಹಿಂದಿನ ಸರ್ಕಾರದ ನಿರ್ಧಾರ ಪರಿಶೀಲನೆ: ದಿಸ್ಸನಾಯಕೆ

ಅದಾನಿ ಸಮೂಹಕ್ಕೆ ವಿದ್ಯುತ್‌ ಯೋಜನೆಯ ಗುತ್ತಿಗೆ: ‘ಸುಪ್ರೀಂ’ಗೆ ನಿಲುವು ತಿಳಿಸಿದ ಸರ್ಕಾರ

ಪಿಟಿಐ
Published 14 ಅಕ್ಟೋಬರ್ 2024, 14:46 IST
Last Updated 14 ಅಕ್ಟೋಬರ್ 2024, 14:46 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕೊಲಂಬೊ: ಪವನ ವಿದ್ಯುತ್‌ ಯೋಜನೆಯ ಗುತ್ತಿಗೆಯನ್ನು ಭಾರತದ ಅದಾನಿ ಸಮೂಹಕ್ಕೆ ನೀಡಿರುವ ಶ್ರೀಲಂಕಾದ ಹಿಂದಿನ ಸರ್ಕಾರದ ನಿರ್ಧಾರವನ್ನು ಪರಿಶೀಲಿಸುವುದಾಗಿ ನೂತನ ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕೆ ನೇತೃತ್ವದ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸೋಮವಾರ ತಿಳಿಸಿದೆ.

ಅಕ್ಟೋಬರ್ 7ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಐವರು ಸದಸ್ಯರನ್ನು ಒಳಗೊಂಡ ನ್ಯಾಯಪೀಠಕ್ಕೆ ತಿಳಿಸಿದೆ.

ADVERTISEMENT

ಯೋಜನೆಯು ಶ್ರೀಲಂಕಾದ ಇಂಧನ ವಲಯದ ಸಾರ್ವಭೌಮತೆಗೆ ಬೆದರಿಕೆ ಒಡ್ಡುತ್ತದೆ. ಅಧಿಕಾರಕ್ಕೆ ಬಂದಲ್ಲಿ ಈ ಯೋಜನೆಯನ್ನು ರದ್ದು ಮಾಡುತ್ತೇವೆ ಎಂದು ಚುನಾವಣೆಗೂ ಮೊದಲೇ ನ್ಯಾಷನಲ್‌ ಪೀಪಲ್ಸ್ ಪಾರ್ಟಿ ನೇತೃತ್ವದ ಮೈತ್ರಿಕೂಟ ಹೇಳಿತ್ತು.

ಮ್ಯಾನ್ಮಾರ್‌ ಮತ್ತು ಪೂನೇರಿನ್‌ನಲ್ಲಿ 484 ಮೆಗಾವಾಟ್‌ ಪವನ ವಿದ್ಯುತ್‌ ಉತ್ಪಾದನೆಗೆ 20 ವರ್ಷದ ಒಪ್ಪಂದ ಮಾಡಿಕೊಂಡು ₹3,648 ಲಕ್ಷ ಕೋಟಿ ಹೂಡಿಕೆ ಮಾಡಲು ಅದಾನಿ ಸಮೂಹ ಸಿದ್ಧವಾಗಿದೆ.

ಈ ಮಧ್ಯೆ ಯೋಜನೆಯಿಂದ ಪರಿಸರಕ್ಕೆ ಹಾನಿಯಾಗುತ್ತದೆ ಮತ್ತು ಹರಾಜು ಪ್ರಕ್ರಿಯೆ ಪಾರದರ್ಶಕವಾಗಿ ಇರ‌ಲಿಲ್ಲ ಎಂದು ಶ್ರೀಲಂಕಾದ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.