ADVERTISEMENT

ದಿಸ್ಸಾನಾಯಕೆ: ಭಾರತ ವಿರೋಧಿ ಹೋರಾಟದಿಂದ ಶ್ರೀಲಂಕಾ ಅಧ್ಯಕ್ಷ ಗಾದಿವರೆಗೆ

ಪಿಟಿಐ
ರಾಯಿಟರ್ಸ್
Published 24 ಸೆಪ್ಟೆಂಬರ್ 2024, 1:17 IST
Last Updated 24 ಸೆಪ್ಟೆಂಬರ್ 2024, 1:17 IST
ಅನುರಾ ಕುಮಾರ ದಿಸ್ಸಾನಾಯಕೆ ಅವರು ಸೋಮವಾರ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು –ಪಿಟಿಐ ಚಿತ್ರ
ಅನುರಾ ಕುಮಾರ ದಿಸ್ಸಾನಾಯಕೆ ಅವರು ಸೋಮವಾರ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು –ಪಿಟಿಐ ಚಿತ್ರ   

ಶ್ರೀಲಂಕಾದಲ್ಲಿ ದಿಸ್ಸಾನಾಯಕೆ ಅವರು ‘ಎಕೆಡಿ’ ಎಂದೇ ಪ್ರಸಿದ್ಧ. ಕೊಲಂಬೊದಿಂದ 100 ಕಿ.ಮೀ ದೂರದ ತಂಬುಟ್ಟೇಗಾಮ ಗ್ರಾಮದ ಕಾರ್ಮಿಕ ಕುಟುಂಬದಲ್ಲಿ ದಿಸ್ಸಾನಾಯಕೆ ಅವರ ಜನನ.

‘ಕ್ರಾಂತಿಕಾರಿ ಚೆಗವಾರ ನನಗೆ ಮಾದರಿ’ ಎನ್ನುತ್ತಾರೆ ದಿಸ್ಸಾನಾಯಕೆ. ಭಾರತ ವಿರೋಧಿ ಹೋರಾಟದಿಂದ ಅವರ ಹೋರಾಟದ ಜೀವನ ಆರಂಭಗೊಂಡಿತ್ತು. ಸರ್ಕಾರದ ವಿರುದ್ಧ ಪೀಪಲ್ಸ್‌ ಲಿಬರೇಷನ್‌ ಫ್ರಂಟ್‌ (ಜೆವಿಪಿ) ಎರಡು ದಂಗೆಗಳನ್ನು ರೂಪಿಸಿತ್ತು. ಅದು ವಿಫಲವೂ ಆಗಿತ್ತು. ಆದರೆ ಈ ಯತ್ನದಲ್ಲಿ ಪಕ್ಷದ ಹಲವು ಕಾರ್ಯಕರ್ತರು ಜೀವಕಳೆದುಕೊಂಡಿದ್ದರು.

ಎರಡನೇ ಬಾರಿ ದಂಗೆ ರೂಪಿಸಿದಾಗ ದಿಸ್ಸಾನಾಯಕೆ ಅವರು ಜೆವಿಪಿ ಪಕ್ಷದ ವಿದ್ಯಾರ್ಥಿ ನಾಯಕರಾಗಿದ್ದರು. ಶಿಕ್ಷಕರೊಬ್ಬರ ಸಹಕಾರದಿಂದ ಪ್ರಾಣವನ್ನೂ ಉಳಿಸಿಕೊಂಡಿದ್ದರು. ಬಂಡವಾಳಶಾಹಿಗೆ ವಿರೋಧ ತಮಿಳರ ವಿರೋಧ ಮಾರ್ಕ್ಸ್‌ವಾದಿ ಆರ್ಥಿಕ ನೀತಿಗಳ ಪರವಿದ್ದ ಪಕ್ಷವು ತನ್ನ ಸಿದ್ಧಾಂತದಲ್ಲಿ ಬದಲಾವಣೆ ಮಾಡಿಕೊಂಡಿದೆ.

ADVERTISEMENT

ತನ್ನ ಮಾರ್ಕ್ಸ್‌ವಾದಿ ಆರ್ಥಿಕ ನೀತಿಯಿಂದ ಅದು ಈಗ ಉದಾರವಾದಿ ಆರ್ಥಿಕ ನೀತಿಗೆ ಹೊರಳಿದೆ. ದೇಶವನ್ನು ಭ್ರಷ್ಟಾಚಾರ ಮುಕ್ತಗೊಳಿಸಿ ಬಡವರ ಪರ ನೀತಿಗಳನ್ನು ಜಾರಿಗೊಳಿಸಲಾಗುವುದು ಎಂಬುದು ದಿಸ್ಸಾನಾಯಕೆ ಅವರ ಪ್ರತಿ ಚುನಾವಣಾ ಭಾಷಣದ ಹೂರಣವಾಗಿತ್ತು.

2000ರಲ್ಲಿ ಮೊದಲ ಬಾರಿಗೆ ಸಂಸತ್ತು ಪ್ರವೇಶಿಸಿದರು. 2004ರಲ್ಲಿ ಕೃಷಿ ಸಚಿವರಾದರು. ಈಗ ಅವರು ಶ್ರೀಲಂಕಾದ ಅಧ್ಯಕ್ಷ ಗಾದಿಗೆ ಏರಿದ್ದಾರೆ. 

ದಂಗೆ ರೂಪಿಸಿದ ಕಳಂಕವನ್ನು ಕಳಚಿಕೊಂಡ ಜೆವಿಪಿ ಪಕ್ಷವು 2022ರ ಆರ್ಥಿಕ ಹಿಂಜರಿತ ವಿರುದ್ಧದ ಚಳವಳಿಯ ಬಳಿಕ ದೇಶದ ರಾಜಕಾರಣದಲ್ಲಿ ಮುನ್ನೆಲೆಗೆ ಬಂದಿತು. 2019ರ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಪಕ್ಷವು ಕೇವಲ ಶೇ 3ರಷ್ಟು ಮತಗಳನ್ನು ಗಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.