ADVERTISEMENT

ಅಮೆರಿಕದಲ್ಲಿ ದೀಪಾವಳಿ ಆಚರಣೆ

ಪಿಟಿಐ
Published 14 ನವೆಂಬರ್ 2024, 12:34 IST
Last Updated 14 ನವೆಂಬರ್ 2024, 12:34 IST
   

ವಾಷಿಂಗ್ಟನ್‌: ಅಮೆರಿಕದ ವಾಷಿಂಗ್ಟನ್‌ನಲ್ಲಿ 25ಕ್ಕೂ ಅಧಿಕ ಸಂಸದರು ಮತ್ತು ಭಾರತೀಯ ಮೂಲದ ಪ್ರಮುಖ ಅಮೆರಿಕನ್ನರು ಸಂಸತ್‌ ಭವನದಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಿದರು.

ಅಧ್ಯಕ್ಷೀಯ ಚುನಾವಣೆ ನಂತರ ಅಮೆರಿಕ ಸರ್ಕಾರ ಆಚರಿಸಿದ ಮೊಟ್ಟ ಮೊದಲ ಪ್ರಮುಖ ಹಬ್ಬ ಇದಾಗಿದೆ.

ಬಿಎಪಿಎಸ್‌ ಶ್ರೀ ಸ್ವಾಮಿನಾರಾಯಣ ಮಂದಿರ ಮತ್ತು ಹಿಂದೂ ಅಮೆರಿಕನ್‌ ಫೌಂಡೇಷನ್‌, ಸಿಖ್ಸ್‌ ಫಾರ್‌ ಅಮೆರಿಕ, ಜೈನ್‌ ಅಸೋಸಿಯೇಷನ್ ಆಫ್ ನಾರ್ತ್‌ ಅಮೆರಿಕ, ಆರ್ಟ್‌ ಆಫ್‌ ಲಿವಿಂಗ್‌ ಸೇರಿದಂತೆ ಹಲವು ಭಾರತೀಯ ಅಮೆರಿಕನ್‌ ಸಂಘಟನೆಗಳ ಸಹಭಾಗಿತ್ವದಲ್ಲಿ ಇತ್ತೀಚೆಗೆ ದೀಪಾವಳಿ ಆಚರಿಸಲಾಯಿತು.

ADVERTISEMENT

ಈ ಸಂದರ್ಭದಲ್ಲಿ ಮಾತನಾಡಿದ ಸೆನೆಟರ್‌ ರ‍್ಯಾಂಡ್‌ ಪೌಲ್‌ ಅವರು, ‘ಅಮೆರಿಕವು ವಲಸಿಗರ ಭೂಮಿ. ವಿಶ್ವದ ಅತ್ಯುತ್ತಮ ಸಂಗತಿಗಳನ್ನು ಅದು ಆಕರ್ಷಿಸುತ್ತದೆ’ ಎಂದು ಹೇಳಿದರು.

ಮಿಸಿಸಿಪ್ಪಿ ಸೆನೆಟರ್‌ ಸಿಂಡಿ ಹೈದೆ–ಸ್ಮಿತ್‌ ಅವರು, ‘ಈ ದೇಶದ ಸಮೃದ್ಧಿಯನ್ನು ನಾವು ಬಯಸುತ್ತೇವೆ. ಹೊಸದನ್ನು ಬಯಸುವವರು ಹೊಸದನ್ನು ಮಾಡಬೇಕು. ನಮಗೆ ಸ್ಥಿರ ವಾತಾವರಣ, ಅತ್ಯುತ್ತಮ ಆರ್ಥಿಕತೆ ಬೇಕಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.