ADVERTISEMENT

ಜೋ ಬೈಡನ್ ಪದಗ್ರಹಣದ ದಿನದಂದೇ ಸೆನೆಟ್‌ನಲ್ಲಿ ಟ್ರಂಪ್ ವಿರುದ್ಧ ದೋಷಾರೋಪಣೆ

ಏಜೆನ್ಸೀಸ್
Published 15 ಜನವರಿ 2021, 2:57 IST
Last Updated 15 ಜನವರಿ 2021, 2:57 IST
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್   

ವಾಷಿಂಗ್ಟನ್: ಕ್ಯಾಪಿಟಲ್ ಹಿಲ್ಸ್ ಮೇಲೆ ದಾಳಿಗೆ ಬೆಂಬಲಿಗರಿಗೆ ಪ್ರಚೋದನೆ ನೀಡಿದ ಗಂಭೀರ ಆರೋಪ ಹೊತ್ತಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಜನವರಿ 20ರಂದು ಅಲ್ಲಿನ ಸಮಯ ಮಧ್ಯಾಹ್ನ 1 ಗಂಟೆಗೆ ದೋಷಾರೋಪಣೆ ಪ್ರಕ್ರಿಯೆ ಆರಂಭವಾಗಲಿದೆ. ಅಂದೇ ಜೈ ಬೈಡನ್ ಅಮೆರಿಕ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ.

ಅಸೋಸಿಯಿಟ್ ಪ್ರೆಸ್ ಪಡೆದುಕೊಂಡಿರುವ ಸೆನೆಟ್ ವೇಳಾಪಟ್ಟಿಯಲ್ಲಿ ಈ ಮಾಹಿತಿ ಉಲ್ಲೇಖಿಸಲಾಗಿದೆ.

ಇದು ಸಂಭಾವ್ಯ ವೇಳಾಪಟ್ಟಿಯಾಗಿದ್ದು, ಡೊನಾಲ್ಡ್ ಟ್ರಂಪ್ ವಿರುದ್ಧದ ದೋಷಾರೋಪಣೆ ವಿವರಗಳನ್ನು ಸದನದ ಸ್ಪೀಕರ್ ನ್ಯಾನ್ಸಿ ಪೆಲೋಸಿ ಸೆನೆಟ್‌ಗೆ ಶೀಘ್ರ ಕಳುಹಿಸಿದರೆ ಈ ವೇಳಾಪಟ್ಟಿಯಂತೆ ಮಹಾಭಿಯೋಗ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಕ್ಯಾಪಿಟಲ್ಸ್ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಬಲಿಗರಿಗೆ ಪ್ರಚೋದನೆ ನೀಡಿದ ಏಕೈಕ ಆರೋಪದ ಮೇಲೆ ಡೋನಾಲ್ ಟ್ರಂಪ್ ಅವರನ್ನು ಸದನವು ದೋಷಾರೋಪಣೆಗೆ ಒಳಪಡಿಸಿತ್ತು.

ADVERTISEMENT

ಅಮೆರಿಕದ ಇತಿಹಾಸದಲ್ಲಿ ಎರಡೆರಡು ಬಾರಿ ದೋಷಾರೋಪಣೆಗೆ ಒಳಗಾದ ಏಕೈಕ ಅಧ್ಯಕ್ಷ ಎಂಬ ಅಪಖ್ಯಾತಿಗೆ ಟ್ರಂಪ್ ಪಾತ್ರರಾಗಿದ್ದಾರೆ. ಈ ಮಧ್ಯೆ, ದೋಷಾರೋಪಣೆ ಕುರಿತ ವಿವರಗಳನ್ನು ಸೆನೆಟ್‌ಗೆ ಯಾವಾಗ ಕಳುಹಿಸಲಾಗುತ್ತದೆ ಎಂಬ ಬಗ್ಗೆ ಸ್ಪೀಕರ್ ನ್ಯಾನ್ಸಿ ಪೆಲೋಸಿ ಮಾಹಿತಿ ನೀಡಿಲ್ಲ.

ಕೆಲವು ಡೆಮಾಕ್ರಟಿಕ್ ಸದಸ್ಯರು ಜೋ ಬೈಡನ್ ಅಧಿಕಾರ ಸ್ವೀಕಾರ ಪ್ರಕ್ರಿಯೆ ಸ್ವಲ್ಪ ಕಾಲ ತಡೆಯಲು ಸೂಚಿಸಿದ್ದರೆ, ಮತ್ತೆ ಕೆಲವರು ಅವರ ಆದ್ಯತೆ ಮೇರೆಗೆ ಮುಂದುವರಿಯಲು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ದೋಷಾರೋಪಣೆ ಪ್ರಕ್ರಿಯೆ ಮತ್ತು ಕ್ಯಾಬಿನೆಟ್ ನಾಮಿನಿಗಳ ದೃಢೀಕರಣ ಮತ್ತು ಕೋವಿಡ್ ಕೆಲಸ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ಸಮಯವನ್ನು ವಿಂಗಡಿಸಬಹುದು ಎಂದು ಸೆನೆಟ್‌ಗೆ ಬೈಡೆನ್ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.