ವಾಷಿಂಗ್ಟನ್: ಭಾರತ ಮೂಲದವರಾದ ಅಮೆರಿಕದ ವಿಜಯ್ ಶಂಕರ್ ಅವರನ್ನು ಮೇಲ್ಮನವಿ ನ್ಯಾಯಾಲಯಕ್ಕೆ ನ್ಯಾಯಾಧೀಶರನ್ನಾಗಿ ನೇಮಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉದ್ದೇಶಿಸಿದ್ದಾರೆ.
ವಾಷಿಂಗ್ಟನ್ ಡಿಸಿಯಲ್ಲಿ ಇದು ಉನ್ನತ ನ್ಯಾಯಾಲಯವಾಗಿದೆ. ವಿಜಯ್ ಶಂಕರ್ ಅವರ ನೇಮಕಕ್ಕೆ ಸೆನೆಟ್ ಅನುಮೋದನೆ ನೀಡಬೇಕಾಗಿದೆ.
ಪ್ರಸ್ತುತ ವಿಜಯ್ ಅವರು ನ್ಯಾಯಾಂಗ ಇಲಾಖೆಯಲ್ಲಿ ಹಿರಿಯ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನ್ಯಾಯಾಂಗ ಇಲಾಖೆ ಸೇರುವ ಮುನ್ನ ಖಾಸಗಿಯಾಗಿ ವಕೀಲಿ ವೃತ್ತಿ ಕೈಗೊಂಡಿದ್ದರು. 2012ರಲ್ಲಿ ನ್ಯಾಯಾಂಗ ಇಲಾಖೆ ಸೇರಿದ್ದರು.
ಕಾನೂನು ಪದವಿ ಪಡೆದ ಬಳಿಕ, ಮೇಲ್ಮನವಿ ನ್ಯಾಯಾಲಯದಲ್ಲಿ ನ್ಯಾಯಾಧೀಶ ಚೆಸ್ಟರ್ ಜೆ. ಸ್ಟ್ರೌಬ್ ಅವರಿಗೆ ಕಾನೂನು ಕ್ಲರ್ಕ್ ಆಗಿಯೂ ಅವರು ಕಾರ್ಯನಿರ್ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.