ವಾಷಿಂಗ್ಟನ್:ಅಮೆರಿಕ ಸೇನಾ ಪಡೆ ಉತ್ತರ ಸಿರಿಯಾದಲ್ಲಿ ಕ್ಷಿಪ್ರ ಕಾರ್ಯಾಚಾರಣೆ ನಡೆಸಿದ್ದು ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯ ನಾಯಕ ಅಬುಬಕರ್ ಅಲ್ ಬಾಗ್ದಾದಿ ತನ್ನನ್ನೇ ತಾನು ಸ್ಫೋಟಿಸಿಕೊಂಡುಸಾವಿಗೀಡಾಗಿದ್ದಾನೆ ಎಂದುಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ತಿಳಿಸಿದ್ದಾರೆ.
‘ನಿನ್ನೆ ರಾತ್ರಿ ಅಮೆರಿಕ ಸೇನೆ ಜಗತ್ತಿನ ನಂ.1 ಉಗ್ರನನ್ನು ಬಲಿ ಪಡೆದಿದೆ. ಅಬು ಬಕರ್ ಅಲ್ ಬಾಗ್ದಾದಿ ಮೃತಪಟ್ಟಿದ್ದಾನೆ. ಬಾಗ್ದಾದಿ ಜಗತ್ತಿನ ಅತ್ಯಂತ ಕ್ರೂರ, ನಿರ್ದಯಿ ಸಂಘಟನೆ ಐಎಸ್‌ಐಎಸ್‌ನಸಂಸ್ಥಾಪಕ. ಆತ ಅಮೆರಿಕ ಸೇನೆಯ ದಾಳಿಗೆ ಸಿಕ್ಕು ಒಂದು ನಾಯಿಯಂತೆ,ಹೇಡಿಯಂತೆ ಸತ್ತಿದ್ದಾನೆ,’ ಎಂದು ಟ್ರಂಪ್ ಹೇಳಿದರು.
ಉತ್ತರ ವಾಯುವ್ಯಸಿರಿಯಾದ ಇಬ್ಲಿಬ್ ಪ್ರಾಂತ್ಯದಲ್ಲಿ ಅಮೆರಿಕ ಸೇನೆಯ ವಿಶೇಷ ಪಡೆಗಳು ಶನಿವಾರ ರಾತ್ರ ಕಾರ್ಯಾಚರಣೆ ನಡೆಸಿದವು. ಬಾಗ್ದಾದಿ ಇದ್ದ ಅಡಗುದಾಣಗಳ ಮೇಲೆ ಅಮೆರಿಕ ವಿಶೇಷ ಪಡೆಗಳು ದಾಳಿ ನಡೆಸಿದಾಗ ಆತ ಸುರಂಗವೊಂದರ ಮೂಲಕ ತಪ್ಪಿಸಿಕೊಳ್ಳಲೆತ್ನಿಸಿದ. ಆದರೆ,ಕೊನೆಗೆ ತನ್ನನ್ನೇ ತಾನು ಸ್ಫೋಟಿಸಿಕೊಂಡು ಸಾವಿಗೀಡಾಗಿದ್ದಾನೆ. ಸ್ಫೋಟದ ಪರಿಣಾಮವಾಗಿ ಆತನ ದೇಹ ಛಿದ್ರವಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
ಇದನ್ನೂ ಓದಿ:ಐಎಸ್ ಉಗ್ರರ ದಾಳಿಗೆ ನಲುಗಿದ ಯಾಜಿದಿ ಮಹಿಳೆಯರು
‘ಅಮೆರಿಕ ಸೇನೆ ದಾಳಿ ಮಾಡುತ್ತಲೇ ಬಾಗ್ದಾದಿ ಭಯಭೀತಗೊಂಡ, ಅಳಲಾರಂಭಿಸಿದ, ಯೋಧರು ಆತನ ಬೆನ್ನು ಹತ್ತುತಲೇ ಆತ ಸುರಂಗವೊಂದಕ್ಕೆ ಓಡಿದ. ಅಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟಿಸಿಕೊಂಡು ಸತ್ತಿದ್ದಾನೆ. ಆತ್ಮಾಹುತಿ ಮಾಡಿಕೊಳ್ಳುವಾಗ ಆತ ತನ್ನ ಮೂವರು ಮಕ್ಕಳನ್ನು ಬಲಿಪಡೆದಿದ್ದಾನೆ,’ ಎಂದು ಅಮೆರಿಕ ಅಧ್ಯಕ್ಷ ಹೇಳಿದ್ದಾರೆ.
‘ಆತ್ಮಾಹುತಿ ಬಾಂಬ್ ಸ್ಫೋಟಿಸಿಕೊಂಡ ಕಾರಣ ಬಾಗ್ದಾದಿ ದೇಹ ಛಿದ್ರಗೊಂಡಿತು. ಆದರೆ, ದೇಹದ ಭಾಗಗಳ ಪರೀಕ್ಷೆ ನಡೆಸಿದಾಗ ಆತ ಬಾಗ್ದಾದಿ ಎಂದು ದೃಢಪಟ್ಟಿದೆ.ಜಗತ್ತನ್ನು ಬೆದರಿಸಲು ಪ್ರಯತ್ನಿಸುತ್ತಿದ್ದ ಕೊಲೆಗಡುಕ ತನ್ನ ಕೊನೆ ಕ್ಷಣಗಳನ್ನು ಅತ್ಯಂತ ಭಯದಿಂದ ಕಳೆದ. ಆತ ಸಂಪೂರ್ಣ ಆತಂಕಗೊಂಡಿದ್ದ. ಅಮೆರಿಕ ಸೇನೆಯನ್ನು ಕಂಡು ನಡುಗುತ್ತಿದ್ದ,’ ಎಂದೂ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಈ ವಿಶೇಷ ಕಾರ್ಯಚರಣೆಗೆನೆರವು ನೀಡಿದ ರಷ್ಯಾ, ಟರ್ಕಿ, ಸಿರಿಯಾ ಮತ್ತು ಇರಾಕ್ ರಾಷ್ಟ್ರಗಳಿಗೆ ಟ್ರಂಪ್ ಧನ್ಯವಾದ ಅರ್ಪಿಸಿದ್ದಾರೆ.
ಇನ್ನಷ್ಟು...
ಮಹಿಳೆಯರ ಜನನಾಂಗ ಛೇದನಕ್ಕೆ ಫತ್ವಾ
ಶ್ರೀಲಂಕಾ ದಾಳಿಯ ಹೊಣೆ ಹೊತ್ತ ಐಎಸ್ ಉಗ್ರ ಸಂಘಟನೆ
2015ರ ಸುದ್ದಿ |ಬಾಗ್ದಾದಿ ಸಾವಿನ ಶಂಕೆ
2017ರ ಸುದ್ದಿ | ಐ.ಎಸ್ ಮುಖ್ಯಸ್ಥ ಬಾಗ್ದಾದಿ ಜೀವಂತ?
2014ರ ಸುದ್ದಿ |ಖಲೀಫ ಬಾಗ್ದಾದಿ ಅಂದು ಹೀಗೆ ಭಾಷಣ ಮಾಡಿದ್ದ
ಭಾರತದಲ್ಲಿ ‘ಪ್ರಾಂತ್ಯ’ ಸ್ಥಾಪನೆ ಇಸ್ಲಾಮಿಕ್ ಸ್ಟೇಟ್ ಹೇಳಿಕೆ
ಐಎಸ್ ಸೇರಿದ್ದ ಕೇರಳದ ಯುವಕ ಸಾವು
ವಾಟ್ಸ್‌ಆ್ಯಪ್‌ನಲ್ಲಿ ಐಎಸ್ ಪರ ಸಂದೇಶ
‘ದಕ್ಷಿಣ ಭಾರತದಲ್ಲಿ ಉಗ್ರರ ನೆಲೆ ವಿಸ್ತರಣೆ: ಎಚ್ಚರಿಕೆ
ಇಸ್ಲಾಮಿಕ್ ಸ್ಟೇಟ್ಸ್ ವಿಡಿಯೊಗಳಲ್ಲಿ ಇಂಗ್ಲಿಷ್ ವಿವರಣೆ ನೀಡಿದಾತ ಈ ಖಲೀಫ!
ಶಿರಚ್ಛೇದ ವಿಡಿಯೊ ನೈಜ: ಬೇಹುಗಾರಿಕಾ ದಳ
ಐಎಸ್ ಉಗ್ರರಿಂದ ತಪ್ಪಿಸಿಕೊಂಡ ಸಂತ್ರಸ್ತರು ಹಸಿವಿನಿಂದ ಕಂಗೆಟ್ಟರು
‘ವಿದಾಯ ಭಾಷಣ’ದಲ್ಲಿ ಐಎಸ್ ಸೋಲೊಪ್ಪಿಕೊಂಡ ಬಾಗ್ದಾದಿ
ಸಂಪಾದಕೀಯ | ಐಎಸ್ ಪ್ರಭಾವ: ನಿರ್ಲಕ್ಷ್ಯ ಸಲ್ಲದು, ಕಟ್ಟೆಚ್ಚರ ವಹಿಸಿ
ಐಎಸ್ ಉಗ್ರರ ದಾಳಿಗೆ ನಲುಗಿದ ಯಾಜಿದಿ ಮಹಿಳೆಯರು
ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರ ನಾಯಕ ಅಲ್ ಬಾಗ್ದಾದಿ ಹತ್ಯೆ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.