ADVERTISEMENT

ಡೊನಾಲ್ಡ್ ಟ್ರಂಪ್- ಅರ್ಜೆಂಟಿನಾ ಅಧ್ಯಕ್ಷ ಜಾವೇರ್‌ ಮಿಲೆ ಗೋಪ್ಯ ಭೇಟಿ

ಏಜೆನ್ಸೀಸ್
Published 15 ನವೆಂಬರ್ 2024, 2:29 IST
Last Updated 15 ನವೆಂಬರ್ 2024, 2:29 IST
<div class="paragraphs"><p>ಡೊನಾಲ್ಡ್ ಟ್ರಂಪ್</p></div>

ಡೊನಾಲ್ಡ್ ಟ್ರಂಪ್

   

– ರಾಯಿಟರ್ಸ್ ಚಿತ್ರ

ಫ್ಲೊರಿಡಾ: ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅರ್ಜೆಂಟಿನಾ ಅಧ್ಯಕ್ಷ ಜಾವೇರ್‌ ಮಿಲೆ ಅವರನ್ನು ಗುರುವಾರ ಭೇಟಿ ಮಾಡಿದರು. ಟ್ರಂಪ್ ಒಡೆತನದ ಮಾರ್‌ – ಅ– ಕ್ಲಬ್‌ನಲ್ಲಿ ಇವರಿಬ್ಬರ ಭೇಟಿ ನಡೆದಿದೆ. ಕಳೆದ ವಾರ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಟ್ರಂಪ್ ಅವರು ವಿದೇಶಿ ನಾಯಕರೊಬ್ಬರನ್ನು ಭೇಟಿಯಾಗಿದ್ದು ಇದೇ ಮೊದಲು. ‌

ADVERTISEMENT

ಈ ಭೇಟಿಯ ಬಗ್ಗೆ ಸಾರ್ವಜನಿಕ ಘೋಷಣೆಯಾಗಿಲ್ಲ. ಹೆಸರು ಗೋಪ್ಯವಾಗಿಡಬೇಕು ಎನ್ನುವ ಷರತ್ತಿನೊಂದಿಗೆ ವ್ಯಕ್ತಿಯೊಬ್ಬರು ಈ ಮಾಹಿತಿ ಹಂಚಿಕೊಂಡಿದ್ದಾರೆ. ಭೇಟಿ ಫಲಪ್ರದವಾಗಿದ್ದು, ಮಿಲೆ ಅವರು ಉದ್ಯಮಿಗಳನ್ನೂ ಭೇಟಿಯಾದರು ಎಂದು ಅವರು ತಿಳಿಸಿದ್ದಾರೆ.

ಭೇಟಿ ಬಳಿಕ ಮಾರ್‌–ಅ–ಲಾಗೋದಲ್ಲಿರುವ ಅಮೆರಿಕ ಫಸ್ಟ್ ಪಾಲಿಸಿ ಇನ್‌ಸ್ಟಿಟ್ಯೂಷನ್‌ನಲ್ಲಿ ಮಿಲೆ ಅವರು ಭಾಷಣ ಮಾಡಿದರು. ಈ ವೇಳೆ ಎಡಪಂಥೀಯ ಚಿಂತನೆಗಳ ವಿರುದ್ಧ ವಾಗ್ದಾಳಿ ನಡೆಸಿದರು. ಉದ್ಯಮಿ ಎಲಾನ್ ಮಸ್ಕ್ ಅವರನ್ನು ಹಾಡಿ ಹೊಗಳಿದ ಮಿಲೆ, ‘ಎಕ್ಸ್’ ವೇದಿಕೆಯು ಮಾನವೀಯತೆಯನ್ನು ಉಳಿಸುವಲ್ಲಿ ಸಹಾಯ ಮಾಡುತ್ತಿದೆ ಎಂದಿದ್ದಾರೆ.

ಟ್ರಂಪ್ ಅವರನ್ನು ಆಗಾಗ್ಗೆ ಹೊಗಳುತ್ತಾ ಬಂದಿರುವ ಮಿಲೆ ಅವರು, ಈ ವರ್ಷ ಫೆಬ್ರುವರಿಯಲ್ಲಿ ವಾಷಿಂಗ್ಟನ್‌ನಲ್ಲಿ ಭೇಟಿ ಮಾಡಿದ್ದರು. ಟ್ರಂಪ್ ಅವರನ್ನು ಅನುಮೋದಿಸಿದ್ದ ಮಿಲೆ, ‘ಪ್ರೆಸಿಡೆಂಟ್’ ಎಂದು ಸಂಬೋಧಿಸಿದ್ದರು. ಟ್ರಂಪ್ ಅವರನ್ನು ತಬ್ಬಿ ಹಿಡಿದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.

2023ರ ನವೆಂಬರ್‌ನಲ್ಲಿ ನಡೆದ ಅರ್ಜೆಂಟಿನಾ ಚುನಾವಣೆಯಲ್ಲಿ ಗೆದ್ದ ಮಿಲೆ ಅವರಿಗೆ ಟ್ರಂಪ್ ಸಾಮಾಜಿಕ ಜಾಲತಾಣ ಮೂಲಕ ಅಭಿನಂದನೆ ಸಲ್ಲಿಸಿದ್ದರು. ‘ನೀವು ದೇಶವನ್ನು ಬದಲಾಯಿಸುತ್ತೀರಿ. ಅರ್ಜೆಂಟಿನಾವನ್ನು ಮತ್ತೆ ಶ್ರೇಷ್ಠ ದೇಶವನ್ನಾಗಿಸಿ’ ಎಂದು ಹಾರೈಸಿದ್ದರು.

(ವಿವಿಧ ಏಜೆನ್ಸಿಗಳ ಮಾಹಿತಿ ಅಧರಿಸಿ ಬರೆದ ಸುದ್ದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.