ವಾಷಿಂಗ್ಟನ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಒಬ್ರೇನ್ ಅವರನ್ನು ಯುಎಸ್–ಆಸಿಯಾನ್ ಮತ್ತು ಪೂರ್ವಾ ಏಷ್ಯಾ ರಾಷ್ಟ್ರಗಳ ಶೃಂಗಸಭೆಯ ವಿಶೇಷ ರಾಯಭಾರಿಯನ್ನಾಗಿ ನೇಮಿಸಿದ್ದಾರೆ.
ವಿಯೆಟ್ನಾಂನ ಹನೋಯಿಯಲ್ಲಿ ನ.13ರಂದು ಅಮೆರಿಕ –ಆಸಿಯಾನ್ ಶೃಂಗಸಭೆ ಮತ್ತು ನ.14ರಂದು ಪೂರ್ವ ಏಷ್ಯಾ ರಾಷ್ಟ್ರಗಳ ಶೃಂಗಸಭೆ ನಡೆದಿದ್ದು, ಈ ಸಭೆಗಳಲ್ಲಿ ಅಮೆರಿಕ ಪಾಲ್ಗೊಂಡಿದೆ.
ಈ ಸಭೆಗಳಿಗೆ ಒಬ್ರೆಯಾನ್ ಅವರು ಅಮೆರಿಕದ ರಾಯಭಾರಿಯಾಗಿ ಭಾಗಿಯಾಗಿದ್ದಾರೆ‘ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕಯ್ಲೇಹ್ ಮ್ಯಾಕ್‌ಎನೈ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.