ADVERTISEMENT

ಸಹಾಯಕನಿಗೆ ಸೋಂಕು: ಡೊನಾಲ್ಡ್ ಟ್ರಂಪ್‌ಗೆ ಪ್ರತಿ ದಿನ ಕೊರೊನಾ ಪತ್ತೆ ಪರೀಕ್ಷೆ

ಏಜೆನ್ಸೀಸ್
Published 8 ಮೇ 2020, 15:05 IST
Last Updated 8 ಮೇ 2020, 15:05 IST
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್    

ವಾಷಿಂಗ್ಟನ್: ಸೇನಾ ಸಹಾಯಕರೊಬ್ಬರಿಗೆ ಕೊರೊನಾ ಸೋಂಕು ತಗುಲಿದ್ದರಿಂದ ಪ್ರತಿ ದಿನ ಸೋಂಕು ಪತ್ತೆ ಪರೀಕ್ಷೆಗೆ ಒಳಗಾಗಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧರಿಸಿದ್ದಾರೆ.

ಆದಾಗ್ಯೂ, ಸಹಾಯಕನ ಜತೆ ನಿಕಟ ಸಂಪರ್ಕದಲ್ಲಿ ಇರಲಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ‘ಉಪಾಧ್ಯಕ್ಷ ಮೈಕ್ ಪೆನ್ಸ್ ಅವರೂ ಸೋಂಕಿತನ ಜತೆ ನಿಕಟ ಸಂಪರ್ಕದಲ್ಲಿರಲಿಲ್ಲ. ಆದರೂ ನಾವಿಬ್ಬರೂ ಕೊರೊನಾ ಪತ್ತೆ ಪರೀಕ್ಷೆಗೆ ಒಳಗಾಗಿದ್ದೇವೆ’ ಎಂದು ಟ್ರಂಪ್ ಹೇಳಿದ್ದಾರೆ.

ಉಪಾಧ್ಯಕ್ಷರೂ ಸೇರಿ ಶ್ವೇತ ಭವನದ ಎಲ್ಲರೂ ಪ್ರತಿ ದಿನ ಕೊರೊನಾ ಪರೀಕ್ಷೆಗೆ ಒಳಗಾಗುವುದಾಗಿಯೂ ಅವರು ತಿಳಿಸಿದ್ದಾರೆ.

ಕೊರೊನಾ ವೈರಸ್ ಸೋಂಕು ಅಮೆರಿಕದಲ್ಲಿ ಅತಿ ಹೆಚ್ಚು ಸಾವು–ನೋವಿಗೆ ಕಾರಣವಾಗಿದೆ. ಜಾನ್ಸ್‌ ಹಾಪ್ಕಿನ್ಸ್ ಮಾಹಿತಿ ಪ್ರಕಾರ, ಅಮೆರಿಕದಲ್ಲಿ ಈವರೆಗೆ 1,256,972 ಜನರಿಗೆ ಸೋಂಕು ತಗುಲಿದ್ದು, 75,781 ಜನ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.