ADVERTISEMENT

ರಿಪಬ್ಲಿಕನ್ ಪಕ್ಷದ ಚುನಾವಣೆ: ನೆವಡಾದಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು

ಏಜೆನ್ಸೀಸ್
Published 9 ಫೆಬ್ರುವರಿ 2024, 13:27 IST
Last Updated 9 ಫೆಬ್ರುವರಿ 2024, 13:27 IST
<div class="paragraphs"><p>ಡೊನಾಲ್ಡ್ ಟ್ರಂಪ್</p></div>

ಡೊನಾಲ್ಡ್ ಟ್ರಂಪ್

   

ವಾಷಿಂಗ್ಟನ್‌: ನೆವಡಾದಲ್ಲಿ ನಡೆದ ರಿಪಬ್ಲಿಕನ್ ಪಕ್ಷದ ಚುನಾವಣೆಯಲ್ಲಿ, ಕಣದಲ್ಲಿದ್ದ ಪ್ರಮುಖ ಏಕೈಕ ಅಭ್ಯರ್ಥಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗುರುವಾರ ಗೆಲುವು ಸಾಧಿಸಿದರು.

ಇಲ್ಲಿನ ಚುನಾವಣೆಯಿಂದ ದೂರ ಉಳಿದಿದ್ದ ವಿಶ್ವಸಂಸ್ಥೆಯ ಮಾಜಿ ರಾಯಭಾರಿ ಹಾಗೂ ಭಾರತೀಯ ಮೂಲದ ರಾಜಕಾರಣಿ ನಿಕ್ಕಿ ಹ್ಯಾಲೆ, ‘ಟ್ರಂಪ್‌ಗೆ ಅನುಕೂಲಕರವಾದ ಅನ್ಯಾಯದ ಪ್ರಕ್ರಿಯೆ ನಡೆದಿದೆ’ ಎಂದು ದೂರಿದ್ದರು.

ADVERTISEMENT

ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ, ಪಕ್ಷದ ಅಭ್ಯರ್ಥಿಯ ನಾಮನಿರ್ದೇಶನಕ್ಕೆ ನೆವಾಡ ರಾಜ್ಯದಿಂದ ಪರಿಗಣಿಸಲ್ಪಡುವ ಏಕೈಕ ಸ್ಪರ್ಧೆ ಇದಾಗಿದೆ.

ನೆವಾಡದಲ್ಲಿ ಗೆದ್ದ ಟ್ರಂಪ್‌ ರಾಜ್ಯದ 26 ಪ್ರತಿನಿಧಿಗಳ ಬೆಂಬಲ ಪಡೆಯಲಿದ್ದಾರೆ. ಪಕ್ಷದ ನಾಮನಿರ್ದೇಶನವನ್ನು ಅಧಿಕೃತವಾಗಿ ಪಡೆಯಲಿಕ್ಕಾಗಿ 1,215 ಪ್ರತಿನಿಧಿಗಳ ಮತ ಪಡೆಯಬೇಕಿದ್ದು, ಮಾರ್ಚ್‌ ವೇಳೆಗೆ ಈ ಸಂಖ್ಯೆ ತಲುಪಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.