ADVERTISEMENT

‘ಲಾಡೆನ್‌ ಅಡಗುದಾಣದ ಬಗ್ಗೆ ಐಎಸ್‌ಐಗೆ ಗೊತ್ತಿರಲಿಲ್ಲ’

ಪಿಟಿಐ
Published 24 ಜುಲೈ 2019, 19:46 IST
Last Updated 24 ಜುಲೈ 2019, 19:46 IST

ನ್ಯೂಯಾರ್ಕ್‌: ‘ಉಗ್ರ ಸಂಘಟನೆ ಅಲ್‌ಕೈದಾ ಮುಖ್ಯಸ್ಥ ಒಸಾಮಾ ಬಿನ್‌ ಲಾಡೆನ್‌ ಪಾಕಿಸ್ತಾನದಲ್ಲಿಯೇ ಅಡಗಿದ್ದ ಎಂಬ ಬಗ್ಗೆ ಐಎಸ್‌ಐ ಹಾಗೂ ಗುಪ್ತಚರ ಇಲಾಖೆಗೂ ಗೊತ್ತಿರಲಿಲ್ಲ’ ಎಂದು ಸಿಐಎ ಮಾಜಿ ನಿರ್ದೇಶಕ ಜನರಲ್‌ ಡೇವಿಡ್‌ ಪೆಟ್ರೀಯಸ್‌ ಹೇಳಿದ್ದಾರೆ.

‘ಪಾಕಿಸ್ತಾನದಲ್ಲಿ ಲಾಡೆನ್‌ ಆಶ್ರಯ ಪಡೆದಿದ್ದ ಬಗ್ಗೆ ಸಿಐಎ ಅಧಿಕಾರಿಗಳಿಗೆ ಐಎಸ್‌ಐ ಮಾಹಿತಿ ನೀಡಿತ್ತು. ಹೀಗಾ ಗಿಯೇ ಅಮೆರಿಕಕ್ಕೆ ಲಾಡೆನ್‌ ಹತ್ಯೆ ಮಾಡಲು ಅನುಕೂಲವಾಯಿತು’ ಎಂದು ಹೇಳಿದ್ದ ಪ್ರಧಾನಿ ಇಮ್ರಾನ್‌ ಖಾನ್‌ಗೆ ಪೆಟ್ರೀಯಸ್‌ ತಿರುಗೇಟು ನೀಡಿದ್ದಾರೆ.

ಇಲ್ಲಿನ ಭಾರತೀಯ ಕಾನ್ಸುಲೇಟ್‌ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

‘ಅಬೊಟ್ಟಾಬಾದ್‌ನಲ್ಲಿ ಲಾಡೆನ್‌ ಅವಿತುಕೊಂಡಿರುವ ಬಗ್ಗೆ ನಮಗೆ ಮಾಹಿತಿ ಇತ್ತು. ಪಾಕಿಸ್ತಾನ ಮಿಲಿಟರಿ ಅಕಾಡೆಮಿಯಲ್ಲಿ ಉಪನ್ಯಾಸ ನೀಡಲು ಹೋದ ಸಂದರ್ಭದಲ್ಲಿ ಲಾಡೆನ್‌ ಅವಿ ತಿದ್ದ ಕಟ್ಟಡದ ಮೇಲಿಂದ ನಾನಿದ್ದ ಹೆಲಿಕಾಪ್ಟರ್‌ ಹಾದು ಹೋಗಿದ್ದು ನನಗೆ ಖಾತರಿಯಾಗಿತ್ತು’ ಎಂದೂ ಅವರು ಹೇಳಿದ್ದಾರೆ.

‘ಉಗ್ರರಿಂದಲೇ ಪಾಕ್‌ಗೆ ಬೆದರಿಕೆ’:ಪಾಕಿಸ್ತಾನದ ಅಸ್ತಿತ್ವಕ್ಕೆ ನಿಜವಾದ ಬೆದರಿಕೆ ಇರುವುದು ಆ ದೇಶದಲ್ಲಿರುವ ಉಗ್ರರಿಂದಲೇ ಹೊರತು ಭಾರತದಿಂದ ಅಲ್ಲ ಎಂದು ಸಿಐಎ ಮಾಜಿ ನಿರ್ದೇಶಕ ಪೆಟ್ರೀಯಸ್‌ ಪ್ರತಿಪಾದಿಸಿದರು.

‘ಈ ಉಗ್ರ ಸಂಘಟನೆಗಳಿಂದ ಒದಗಿರುವ ಬೆದರಿಕೆಯನ್ನು ಮಟ್ಟ ಹಾಕಲು ಪ್ರಧಾನಿ ಇಮ್ರಾನ್‌ ಸಮರ್ಥರಿದ್ದಾರೆ ಎಂಬ ಭರವಸೆ ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.