ADVERTISEMENT

ಕಾಂಗೋದಲ್ಲಿ ಸಶಸ್ತ್ರ ಗುಂಪುಗಳ ದಾಳಿ, 20ಕ್ಕೂ ಹೆಚ್ಚು ಜನರು ಸಾವು: ವಿಶ್ವಸಂಸ್ಥೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2023, 2:13 IST
Last Updated 14 ಫೆಬ್ರುವರಿ 2023, 2:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಿಶ್ವಸಂಸ್ಥೆ: ಡೆಮಾಕ್ರಟಿಕ್‌ ರಿಪಬ್ಲಿಕ್‌ ಆಫ್‌ ಕಾಂಗೋ (ಡಿಆರ್‌ಸಿ) ಸಶಸ್ತ್ರ ಗುಂಪುಗಳು ಕಳೆದ ವಾರಾಂತ್ಯದಲ್ಲಿ ನಡೆಸಿದ ದಾಳಿಯಲ್ಲಿ 20ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆಯ ಮೂಲಗಳು ತಿಳಿಸಿವೆ.

ಪ್ರಾಥಮಿಕ ವರದಿಗಳ ಪ್ರಕಾರ, ಡಿಆರ್‌ಸಿಯ ಇತುರಿ ಪ್ರಾಂತ್ಯದಲ್ಲಿ ಸಿಒಡಿಇಸಿಒ ಸಶಸ್ತ್ರ ಗುಂಪು ಕನಿಷ್ಠ 20 ನಾಗರಿಕರನ್ನು ಭಾನುವಾರ ಹತ್ಯೆ ಮಾಡಿದೆ. ಹಲವು ಮನೆಗಳಿಗೆ ಬೆಂಕಿ ಹಚ್ಚಿದೆ ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್‌ ಅವರ ವಕ್ತಾರ ಸ್ಟೀಫನ್‌ ಡುಜಾರಿಕ್‌ ಮಾಹಿತಿ ನೀಡಿದ್ದಾರೆ.

ದಿಜುಗು ಪ್ರದೇಶದಲ್ಲಿರುವ ಹಳ್ಳಿಗಳ ಮೇಲೆ ಸರಣಿ ದಾಳಿ ನಡೆಸಿದ್ದ ಶಸ್ತ್ರಧಾರಿಗಳು, ವೈದ್ಯಕೀಯ ಮೂಲಸೌಕರ್ಯಗಳಿಗೆ ಹಾನಿ ಮಾಡಿದೆ ಎಂದು ತಿಳಿಸಿರುವುದಾಗಿಯೂ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ADVERTISEMENT

ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಮಾತನಾಡಿರುವ ಡುಜಾರಿಕ್‌, ಅದೇ ವೇಳೆ ಇರುಮು ಪ್ರಾಂತ್ಯದ ಎರಡು ಹಳ್ಳಿಗಳ ಮೇಲೆ ದಾಳಿ ಮಾಡಿದ್ದ ಮತ್ತೊಂದು ಗುಂಪು, 12 ಜನರನ್ನು ಹತ್ಯೆ ಮಾಡಿದೆ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.