ಜೆರುಸಲೇಂ: ಹಮಾಸ್ ಬಂಡುಕೋರ ಸಂಘಟನೆಯ ಮುಖ್ಯಸ್ಥ ಯಹ್ಯಾ ಸಿನ್ವರ್ (61) ಎಂಬಾತನನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಹೇಳಿದೆ.
ಅ. 7, 2023 ರಂದು ಇಸ್ರೇಲ್ ಮೇಲೆ ನಡೆಸಲಾಗಿದ್ದ ದಾಳಿಯ ಪ್ರಮುಖ ಸಂಚುಕೋರ ಈತನಾಗಿದ್ದ. ಸಿನ್ವರ್‌ನನ್ನು ಹತ್ಯೆ ಮಾಡಲಾಗಿದೆ ಎಂದು ಖಚಿತಪಡಿಸಿರುವ ಇಸ್ರೇಲ್ ವಿಡಿಯೊವೊಂದನ್ನು ಬಿಡುಗಡೆ ಮಾಡಿದೆ.
ಇಸ್ರೇಲ್ ಬಿಡುಗಡೆ ಮಾಡಿದ ಡ್ರೋನ್ ದೃಶ್ಯಾವಳಿಯಲ್ಲಿ ಯಹ್ಯಾ ಸಿನ್ವರ್‌ನ ಕೊನೆಯ ಕ್ಷಣಗಳನ್ನು ನೋಡಬಹುದು. ತನ್ನ ಅಂತ್ಯದ ಕ್ಷಣಗಳಲ್ಲಿ, ಸಿನ್ವರ್ ಡ್ರೋನ್ ಕಡೆಗೆ ವಸ್ತುವೊಂದನ್ನು ಎಸೆಯುತ್ತಿರುವುದು ಕಾಣುತ್ತದೆ.
ಈ ನಡುವೆ ಸಿನ್ವರ್ ಹತ್ಯೆಯಿಂದ ಹಮಾಸ್‌ಗೆ ಭಾರಿ ಪೆಟ್ಟು ಬಿದ್ದಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ‘ಆದರೆ, ಇದರಿಂದ ಯುದ್ಧ ಅಂತ್ಯ ಗೊಂಡಿಲ್ಲ. ಸಿನ್ವರ್ ಹತ್ಯೆಯೂ ಹಮಾಸ್ ಪಿಡುಗು ನಿರ್ಮೂಲನೆಗೊಳಿಸುವ ಯತ್ನ ದಲ್ಲಿ ದೊಡ್ಡ ಮೈಲುಗಲ್ಲು ಇದಾಗಿದೆ’ ಎಂದು ಹೇಳಿದ್ದಾರೆ.
‘ಗಾಜಾದಲ್ಲಿ ಗುರುವಾರ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು ಮೂವರು ಬಂಡುಕೋರರು ಮೃತಪಟ್ಟಿದ್ದು, ಇವರಲ್ಲಿ ಸಿನ್ವರ್ ಕೂಡ ಒಬ್ಬರು ಎಂದು ವರದಿಯಾಗಿದೆ. ಆದಾಗ್ಯೂ ಸಿನ್ವರ್ ಮೃತಪಟ್ಟಿದ್ದಾರೆ ಎಂಬುದನ್ನು ಹಮಾಸ್ ಸಂಘಟನೆ ದೃಢಪಡಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.