ADVERTISEMENT

ಸಿನ್ವರ್ ಹತ್ಯೆ ಬೆನ್ನಲ್ಲೇ ನೆತನ್ಯಾಹು ಮನೆ ಗುರಿಯಾಗಿಸಿಕೊಂಡು ಡ್ರೋನ್ ದಾಳಿ

ರಾಯಿಟರ್ಸ್
Published 19 ಅಕ್ಟೋಬರ್ 2024, 7:57 IST
Last Updated 19 ಅಕ್ಟೋಬರ್ 2024, 7:57 IST
<div class="paragraphs"><p>ಬೆಂಜಮಿನ್ ನೆತನ್ಯಾಹು</p></div>

ಬೆಂಜಮಿನ್ ನೆತನ್ಯಾಹು

   

– ರಾಯಿಟರ್ಸ್ ಚಿತ್ರ

ಜೆರುಸಲೇಂ: ಹಮಾಸ್ ಮುಖ್ಯಸ್ಥ ಯಹ್ಯಾ ಸಿನ್ವರ್ ಹತ್ಯೆ ಬೆನ್ನಲ್ಲೇ, ಇಸ್ರೇಲ್‌ ಉತ್ತರ ಭಾಗದ ಸೆಸೆರಿಯಾ ನಗರದಲ್ಲಿರುವ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಮನೆಯನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಲಾಗಿದೆ ಎಂದು ಅವರ ವಕ್ತಾರ ತಿಳಿಸಿದ್ದಾರೆ. ಆದರೆ ಪ್ರಧಾನಿಯವರು ಮನೆಯಲ್ಲಿ ಇರಲಿಲ್ಲ. ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

ADVERTISEMENT

ಇದಕ್ಕೂ ಮುನ್ನ ಲೆಬನಾನ್‌ನಿಂದ ನಡೆಸಲಾದ ಡ್ರೋನ್ ದಾಳಿ ಕಟ್ಟಡವೊಂದನ್ನು ಹಾನಿಗೊಳಿಸಿತ್ತು ಎಂದು ಇಸ್ರೇಲ್ ಸೇನೆ ತಿಳಿಸಿತ್ತು. ಆದರೆ ಯಾವ ಕಟ್ಟಡ ಎನ್ನುವ ಮಾಹಿತಿಯನ್ನು ಸೇನಾಪಡೆಗಳು ಸ್ಪಷ್ಟಪಡಿಸಿಲ್ಲ. ಇನ್ನೂ ಎರಡು ಡ್ರೋನ್‌ಗಳು ಇಸ್ರೇಲ್ ಭೂ‍‍ಪ್ರದೇಶವನ್ನು ನುಸುಳಿತ್ತು. ಅದನ್ನು ಹೊಡೆದುರಳಿಸಲಾಗಿದೆ ಎಂದು ಸೇನೆ ಹೇಳಿದೆ.‌‌

ನೆತನ್ಯಾಹು ಅವರ ರಜಾ ದಿನಗಳ ಮನೆ ಇರುವ ಕರಾವಳಿ ಪಟ್ಟಣದಲ್ಲಿ ಸ್ಫೋಟಗಳು ಕೇಳಿಬಂದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಇಸ್ರೇಲಿ ಆ್ಯಂಬುಲೆನ್ಸ್ ಸೇವೆ ಮತ್ತು ಪೊಲೀಸ್ ವರದಿ ಹೇಳಿದೆ.

ಹಿಜ್ಬುಲ್ಲಾ ಅಥವಾ ಇತರ ಯಾವುದೇ ಸಂಘಟನೆಗಳು ತಕ್ಷಣವೇ ಡ್ರೋನ್ ದಾಳಿಯ ಹೊಣೆ ಹೊತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.