ಇಸ್ಲಮಾಬಾದ್: ಅಪರಾಧಿಗಳಿಗೆ ಪಾಕಿಸ್ತಾನದ ಚುಕ್ಕಾಣಿಯನ್ನು ಕೊಡುವ ಬದಲು ದೇಶದ ಮೇಲೆ ಅಣುಬಾಂಬ್ ಹಾಕುವುದು ಹೆಚ್ಚು ಉತ್ತಮ ಎಂದು ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಶುಕ್ರವಾರ ಮಾಧ್ಯಮದ ಜೊತೆ ಮಾತನಾಡಿದ ಇಮ್ರಾನ್ ಖಾನ್, ಪಾಕಿಸ್ತಾನ ಸೇನೆಯಿಂದ ದೂರವಾಣಿ ಕರೆ ಮತ್ತು ಸಂದೇಶಗಳು ಬರುತ್ತಿವೆ. ಆದರೆ ಅವರ ನಂಬರ್‌ಗಳನ್ನು ಬ್ಲಾಕ್ ಮಾಡಿದ್ದೇನೆ. ಚುನಾವಣೆ ಘೋಷಣೆಯಾಗುವ ವರೆಗೆ ಯಾರೊಬ್ಬರ ಜೊತೆಗೂ ಮಾತನಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಪ್ರಧಾನಿ ಹುದ್ದೆ ಕಳೆದುಕೊಂಡಿದ್ದರ ಹಿಂದೆ ಅಮೆರಿಕ ಕೈವಾಡವಿದೆ ಎಂಬ ಆರೋಪವನ್ನು ಇಮ್ರಾನ್ ಖಾನ್ ಪುನರುಚ್ಚರಿಸಿದ್ದಾರೆ.
'ಕೈವಾಡವನ್ನು ಬೆಂಬಲಿಸಿದವರಿಗೆ ಪಾಕಿಸ್ತಾನದ ಭವಿಷ್ಯದ ಬಗ್ಗೆ ಚಿಂತೆಯಿಲ್ಲ. ಇಂತಹ ಅಪರಾಧಿಗಳನ್ನು ಅಧಿಕಾರದಲ್ಲಿ ಕೂರಿಸುವುದಕ್ಕಿಂತ ಪಾಕಿಸ್ತಾನದ ಮೇಲೆ ಅಣುಬಾಂಬ್ ಹಾಕುವುದು ಉತ್ತಮ' ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.