ADVERTISEMENT

ಇನ್‌ಸ್ಟಾಗ್ರಾಂ ಮೂಲಕ ಪತಿಗೆ ತ್ರಿವಳಿ ತಲಾಖ್‌ ನೀಡಿದ ದುಬೈ ರಾಜಕುಮಾರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಜುಲೈ 2024, 14:40 IST
Last Updated 17 ಜುಲೈ 2024, 14:40 IST
<div class="paragraphs"><p>ದುಬೈ ರಾಜಕುಮಾರಿ</p></div>

ದುಬೈ ರಾಜಕುಮಾರಿ

   

ದುಬೈ: ದುಬೈ ರಾಜಕುಮಾರಿ ಶೈಖಾ ಮಹ್ರಾ ಬಿನ್‌ ಮೊಹಮ್ಮದ್‌ ಬಿನ್‌ ರಶೀದ್‌ ಅಲ್‌ ಮುಕ್ತಮ್‌ ಅವರು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ ಮೂಲಕವೇ ಪತಿ ಶೇಖ್‌ ಮನಾ ಬಿನ್‌ ಮೊಹಮ್ಮದ್‌ ಬಿನ್‌ ರಶೀದ್‌ ಬಿನ್‌ ಮನಾ ಅಲ್‌ ಮುಕ್ತಮ್‌ ಅವರಿಗೆ ವಿಚ್ಛೇದನ ನೀಡಿದ್ದಾರೆ.

ದಂಪತಿಗೆ ಕಳೆದ ಎರಡು ತಿಂಗಳ ಹಿಂದೆಯಷ್ಟೇ ಮಗು ಜನಿಸಿತ್ತು. ಇದರ ಬೆನ್ನಲ್ಲೇ ಹೊರಬಿದ್ದ ವಿಚ್ಛೇದನ ಸುದ್ದಿ ಅಚ್ಚರಿ ಮೂಡಿಸಿದೆ.

ADVERTISEMENT

ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಶೈಖಾ, ‘ಪ್ರೀತಿಯ ಪತಿ, ನಿಮ್ಮನ್ನು ಬೇರೊಬ್ಬ ಸಂಗಾತಿ ಆವರಿಸಿದ್ದರಿಂದ ನಾನು ನಿಮಗೆ ವಿಚ್ಛೇದನವನ್ನು ನೀಡುತ್ತಿದ್ದೇನೆ’ ಎಂದು ತ್ರಿವಳಿ ತಲಾಖ್‌ ನೀಡಿದ್ದಾರೆ. ಕೊನೆಯಲ್ಲಿ ‘ಇಂತಿ ನಿಮ್ಮ ಮಾಜಿ ಪತ್ನಿ’ ಎಂದು ಬರೆದು ಶೇಖ್‌ ಅವರಿಗೆ ಶುಭಕೋರಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ಮಿಂಚಿನಂತೆ ಹರಡಿದ ಈ ಸುದ್ದಿಯ ಬೆನ್ನಲ್ಲೇ ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಜೊತೆಯಾಗಿರುವ ಫೋಟೊಗಳನ್ನು ಡಿಲೀಟ್‌ ಮಾಡಿದ್ದಾರೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.