ಅಸುನ್‌ಸಿಯೋನ್ (ಪೆರಗ್ವೆ) (ಪಿಟಿಐ): ಇಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಪೆರಗ್ವೆಯ ವಿದೇಶಾಂಗ ಸಚಿವ ಜೂಲಿಯೊ ಸೀಸರ್ ಅರ್‍ರಿಯೋಲಾ ಜತೆಗೂಡಿ ಉದ್ಘಾಟಿಸಿದರು.
ಕಚೇರಿಯ ಉದ್ಘಾಟನೆಯಿಂದ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವು ಹೊಸ ಎತ್ತರಕ್ಕೆ ಏರಲಿದೆ ಎಂದು ಜೂಲಿಯೊ ಸೀಸರ್ ಅಭಿಪ್ರಾಯಪಟ್ಟರು.
ಭಾರತದ ಹಿಂದಿನ ಯಾವ ವಿದೇಶಾಂಗ ಸಚಿವರೂ ಪೆರಗ್ವೆಗೆ ಇದುವರೆಗೂ ಭೇಟಿ ನೀಡಿರಲಿಲ್ಲ. ಜತೆಗೆ, ಎರಡೂ ದೇಶಗಳ ರಾಜತಾಂತ್ರಿಕ ಸಂಬಂಧಕ್ಕೆ 60 ವರ್ಷ ತುಂಬಿದ ಸಂದರ್ಭವೂ ಇದಾಗಿದ್ದು, ಭೇಟಿಗೆ ಮಹತ್ವ ಬಂದಿದೆ ಎನ್ನಲಾಗಿದೆ. ಪೆರಗ್ವೆಯಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಈ ವರ್ಷದ ಜನವರಿಯಿಂದಲೇ ಪ್ರಾರಂಭವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.