ಪೋರ್ಟ್–ಯು–ಪ್ರಿನ್ಸ್ : ‘ದಕ್ಷಿಣ ಹೈಟಿಯಲ್ಲಿ ಮಂಗಳವಾರ ಭೂಕಂಪನವಾಗಿದ್ದು, ಮೂವರು ಮೃತಪಟ್ಟಿದ್ದಾರೆ’ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದರು.
‘ಭೂಕಂಪನದಿಂದ ಕುಸಿದುಬಿದ್ದ ಮನೆಗಳ ಅವಶೇಷಗಳಡಿ ಸಿಲುಕಿದ್ದ ಮೂವರ ಶವಗಳನ್ನು ಹೊರತೆಗೆಯಲು ಹಾಗೂ ಬದುಕಿದ್ದವರನ್ನು ರಕ್ಷಿಸಲು ಹಲವರು ತೀವ್ರ ಹುಡುಕಾಟ ನಡೆಸಿದರು’ ಎಂದು ‘ಅಸೋಸಿಯೇಟೆಡ್ ಪ್ರೆಸ್’ ಸುದ್ದಿ ಸಂಸ್ಥೆಗೆ ಜೆರಿಮಿಯ ಹೈಟಿ ನಾಗರಿಕ ರಕ್ಷಣಾ ಸಮಿತಿಯ ಫ್ರ್ಯಾಂಕೆಲ್ ಮಾಹಿತಿ ನೀಡಿದರು.
ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ ದಕ್ಷಿಣ ಕರಾವಳಿ ನಗರವಾದ ಜೆರಿಮಿಯ ಬಳಿ 10 ಕಿ.ಮೀ ಆಳದಲ್ಲಿ ಭೂಕಂಪನವಾಗಿದ್ದು, ಇದರ ತೀವ್ರತೆ 4.9ರಷ್ಟಿದೆ.
2022ರ ಆಗಸ್ಟ್‌ನಲ್ಲಿ ದಕ್ಷಿಣ ಹೈಟಿಯಲ್ಲಿ ಸಂಭವಿಸಿದ್ದ ಭೂಕಂಪದಲ್ಲಿ 2,200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಸಾಕಷ್ಟು ಹಾನಿಯಾಗಿತ್ತು. ಆಗ ತಮ್ಮ ಮನೆಗಳನ್ನು ಕಳೆದುಕೊಂಡ ಹಲವರು ಇಂದಿಗೂ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.