ADVERTISEMENT

ಅಭಿಜಿತ್‌ ಬ್ಯಾನರ್ಜಿ ದಂಪತಿ, ಕ್ರೀಮರ್‌ಗೆ ಅರ್ಥಶಾಸ್ತ್ರ ನೊಬೆಲ್‌

ಬಡತನ ನಿರ್ಮೂಲನೆಗೆ ಪಣ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 10:35 IST
Last Updated 14 ಅಕ್ಟೋಬರ್ 2019, 10:35 IST
ಅಭಿಜಿತ್‌ ಬ್ಯಾನರ್ಜಿ ಮತ್ತು ಪತ್ನಿ ಎಸ್ತರ್‌ ಡಫ್ಲೊ
ಅಭಿಜಿತ್‌ ಬ್ಯಾನರ್ಜಿ ಮತ್ತು ಪತ್ನಿ ಎಸ್ತರ್‌ ಡಫ್ಲೊ   

ಸ್ಟಾಕ್‌ಹೋಮ್‌: ಅಭಿಜಿತ್‌ ಬ್ಯಾನರ್ಜಿ, ಎಸ್ತರ್‌ ಡಫ್ಲೊ ಹಾಗೂ ಮಿಶೆಲ್‌ ಕ್ರೀಮರ್‌ ಅವರು 2019ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್‌ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಜಾಗತಿಕ ಮಟ್ಟದಲ್ಲಿ ಬಡತನ ತಗ್ಗಿಸಲು ಕೈಗೊಂಡಿರುವ ಪ್ರಯೋಗಾತ್ಮಕ ಪರಿಹಾರ ಅಧ್ಯಯಗಳನ್ನುಗುರುತಿಸಿ ನೊಬೆಲ್‌ಗೆ ಆಯ್ಕೆ ಮಾಡಲಾಗಿದೆ.

ಭಾರತೀಯ ಮೂಲದ ಅಭಿಜಿತ್‌ ಬ್ಯಾನರ್ಜಿ ಪ್ರಸ್ತುತ ಅಮೆರಿಕದಲ್ಲಿ ನೆಲೆಸಿದ್ದಾರೆ. ಅವರ ಪತ್ನಿ ಎಸ್ತರ್‌ ಡಫ್ಲೊ ಫ್ರೆಂಚ್‌–ಅಮೆರಿಕನ್. ಮಿಶೆಲ್‌ ಕ್ರೀಮರ್‌ ಅವರೂ ಸಹ ಅಮೆರಿಕ ಮೂಲದವರೇ ಆಗಿದ್ದಾರೆ.

ADVERTISEMENT

ಭಾರತದಲ್ಲಿ ಜನಿಸಿದ ಅಭಿಜಿತ್‌ ಬ್ಯಾನರ್ಜಿ(58) ಹಾರ್ವರ್ಡ್‌ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದಿದ್ದಾರೆ. ಪ್ರಸ್ತುತ ಅಮೆರಿಕದ ಎಂಐಟಿಯಲ್ಲಿ ಅರ್ಥಶಾಸ್ತ್ರ ಪ್ರೊಫೆಸರ್‌ ಆಗಿದ್ದಾರೆ.

ಪ್ಯಾರಿಸ್‌ನಲ್ಲಿ ಹುಟ್ಟಿದ ಎಸ್ತರ್‌ ಡಫ್ಲೊ(57)ಗೆ ಅಮೆರಿಕ ಕರ್ಮಭೂಮಿ. ಇವರೂ ಸಹ ಎಂಐಟಿ ಅರ್ಥಶಾಸ್ತ್ರ ವಿಭಾಗದಲ್ಲಿ ಪ್ರೊಫೆಸರ್‌ ಆಗಿದ್ದಾರೆ. ಎಂಐಟಿಯಲ್ಲಿ ಸಂಶೋಧನಾ ಕಾರ್ಯಗಳಲ್ಲಿ ಅಭಿಜಿತ್‌ ಅವರು ಎಸ್ತರ್‌ಗೆ ಮಾರ್ಗದರ್ಶಕರಾಗಿದ್ದರು. ಅವರ ಪಿಎಚ್‌ಡಿ ಸಂಶೋಧನೆಯಲ್ಲಿ ಅಭಿಜಿತ್‌ ಸಹ ಮಾರ್ಗದರ್ಶನ ನೀಡಿದ್ದರು. ಅಭಿಜಿತ್‌ ಮತ್ತು ಎಸ್ತರ್‌ ಮದುವೆಯಾಗಿದ್ದಾರೆ.

ಮಿಶೆಲ್‌ ಕ್ರೀಮರ್‌(55) ಅವರು ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್‌ ಆಗಿದ್ದಾರೆ. ಅದೇ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದಿದ್ದಾರೆ.

ಪ್ರಶಸ್ತಿಯ 90 ಲಕ್ಷ ಕ್ರೋನಾ (ಸುಮಾರು ₹ 6.5 ಕೋಟಿ) ಬಹುಮಾನದ ಮೊತ್ತವನ್ನು ಮೂವರೂ ಸಂಶೋಧಕರಿಗೆ ಸಮಾನವಾಗಿ ಹಂಚಲಾಗುತ್ತದೆ.

ರಾಯಲ್‌ ಸ್ವೀಡಿಶ್‌ ಅಕಾಡೆಮಿ ಆಫ್‌ ಸೈನ್ಸಸ್‌ನ ಪ್ರಧಾನ ಕಾರ್ಯದರ್ಶಿ ಗೊರಾನ್‌ ಕೆ ಹಾನ್ಸನ್‌ 2019ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್‌ ಪ್ರಶಸ್ತಿ ಘೋಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.